Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಪಿ. ಎ. ರೈ

ಪಿ. ಎ. ರೈ

ಪಿ. ಎ. ರೈಪಿ. ಎ. ರೈ14 Nov 2016 12:31 AM IST
share

 *ಮದ್ಯ ಮಾರಾಟದಿಂದಲೇ ಸರಕಾರ ನಡೆಯುತ್ತಿದೆ ಎಂಬುದು ಸುಳ್ಳು
-ಎಚ್.ವೈ.ಮೇಟಿ, ಸಚಿವ
  ಇನ್ನೂ ಏನೇನೆಲ್ಲ ಮಾರಾಟ ಮಾಡಿ ಸರಕಾರವನ್ನು ನಡೆಸುತ್ತಿದ್ದೀರಿ ಎನ್ನುವುದನ್ನು ಹೇಳಿ.
---------------------
  ಕಾಂಗ್ರೆಸ್ ಕೋಮು ಭಾವನೆ ಸೃಷ್ಟಿಸುವುದಿಲ್ಲ
-ಸತೀಶ್ ಜಾರಕಿಹೊಳಿ, ಮಾಜಿ ಸಚಿವ
  ಬಿಜೆಪಿ ಸೃಷ್ಟಿಸುತ್ತದೆ. ಕಾಂಗ್ರೆಸ್ ಅದನ್ನು ಪೋಷಿಸುತ್ತದೆ.

---------------------
  ಬಿಜೆಪಿ ಮತ್ತು ಅದರ ಕೋಮುವಾದಿ ಶಕ್ತಿಗಳನ್ನು ಮಣಿಸಲು ಎಲ್ಲಾ ಪಕ್ಷಗಳು ಒಂದಾಗಬೇಕು
-ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ
ಐನೂರು, ಒಂದು ಸಾವಿರ ನೋಟುಗಳ ನಿಷೇಧದ ಪರಿಣಾಮ.

--------------------
  ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಮಾಡಿದಷ್ಟು ಕೆಲಸ ಇತರ ಯಾವುದೇ ಪಕ್ಷಗಳು ಮಾಡಿಲ್ಲ
-ರಮಾನಾಥ ರೈ, ಸಚಿವ
ಇಂದಿರಾಗಾಂಧಿ, ಸೋನಿಯಾ ಗಾಂಧಿಯೇ ಅದಕ್ಕೆ ಉದಾಹರಣೆ.

---------------------
  ಹಿಲರಿ ಕ್ಲಿಂಟನ್‌ಗೆ ಇಡೀ ಜಗತ್ತನ್ನು ಕಾಪಾಡುವ ಶಕ್ತಿ ಇದೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
 ನೀವು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದೇ ಸೋಲಿಗೆ ಕಾರಣ.

---------------------
  ವೇದ ಕಾಲದಿಂದಲೂ ಗೋಹತ್ಯೆ ಮತ್ತು ಗೋಮಾಂಸಗಳನ್ನು ನಿಷೇಧಿಸಲಾಗಿದೆ
-ರಾಜನಾಥ್ ಸಿಂಗ್, ಕೇಂದ್ರ ಸಚಿವ
  ನೀವು ಓದಿರುವ ವೇದದ ಹೆಸರನ್ನಾದರೂ ಹೇಳಬಾರದೇ?
---------------------
  ರಸ್ತೆ ಗುಣಮಟ್ಟಕ್ಕೆ ಗುತ್ತಿಗೆದಾರರೇ ಹೊಣೆ
-ಕೆ.ಜೆ ಜಾರ್ಜ್, ಸಚಿವ
  ಅಯೋಗ್ಯರಿಗೆ ಗುತ್ತಿಗೆ ನೀಡಿದವರೂ ಅರ್ಧ ಹೊಣೆಯನ್ನು ಹೊತ್ತುಕೊಳ್ಳಬೇಕು.

---------------------
  ಸಂಸದೆ ಶೋಭಾ ಕರಂದ್ಲಾಜೆ ಯೋಚನೆ ಮಾಡಿ ಮಾತನಾಡುವುದನ್ನು ಕಲಿಯಬೇಕು
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಯಡಿಯೂರಪ್ಪ ಯೋಚನೆ ಮಾಡುತ್ತಾರೆ. ಕರಂದ್ಲಾಜೆ ಮಾತನಾಡುತ್ತಾರೆ.

---------------------
  ರಾಜ್ಯದಲ್ಲಿ ಯಾರೇ ಸತ್ತರೂ ಆತ ಬಿಜೆಪಿ ಕಾರ್ಯಕರ್ತ ಎಂದು ಬಿಜೆಪಿ ಹೋರಾಟ ನಡೆಸುತ್ತಿರುವುದು ಯಾಕೆ?
-ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
  ಕೊಂದವನು ಮುಸ್ಲಿಮನಾಗುವುದು ಎಲ್ಲಕ್ಕಿಂತ ಮುಖ್ಯ.

---------------------
  ಸಿಧು ಒಬ್ಬ ಕಾಮಿಡಿಯನ್
-ಸುಖಬೀರ್ ಬಾದಲ್, ಪಂಜಾಬ್ ಉಪ ಮುಖ್ಯಮಂತ್ರಿ
ನರೇಂದ್ರ ಮೋದಿಯ ಟ್ರಾಜಿಡಿಗಳಿಗಿಂತ ವಾಸಿ.

---------------------
  ಪ್ರಜಾಪ್ರಭುತ್ವ ಕರಾಳ ದಿನಗಳತ್ತ ಸಾಗುತ್ತಿದೆ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ಒಂದು ದಿನ ಕ್ಯೂ ನಿಂತ ಅನುಭವಕ್ಕೆ ಈ ಮಾತೇ?
---------------------
  ಜೀವನದಲ್ಲಿ ಗೊತ್ತಿಲ್ಲದೆ ಅನೇಕ ರೀತಿಯ ಕೊಳೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇದೀಗ 500 ಮತ್ತು ಸಾವಿರ ರೂಪಾಯಿಯ ಕೊಳೆಗಳನ್ನು ಶುಚಿಗೊಳಿಸುವ ಕಷ್ಟ ಬಂದಿದೆಯೆ?
---------------------
  ಪ್ಲಾಸ್ಟಿಕ್ ಸೇವಿಸಿದ ಹಸುಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಅದಕ್ಕೆ ಆಹಾರ ಹಾಕದಿದ್ದರೆ ಪಾಪ ಪ್ಲಾಸ್ಟಿಕ್ ತಿನ್ನದೆ ಇನ್ನೇನು ಮಾಡೀತು?
---------------------
  ರಾಜ್ಯದಲ್ಲಿ 14 ಹಿಂದೂ ಮುಖಂಡರ ಹತ್ಯೆಯಾಗಿದ್ದರೂ ಸರಕಾರ ವೌನವಾಗಿರುವುದು ನಮಗೆ ಚಿಂತೆಯಾಗಿದೆ
-ಶೋಭಾ ಕರಂದ್ಲಾಜೆ, ಸಂಸದೆ
  ಕ್ಯೂನಲ್ಲಿ ನಿಂತು ಮೃತಪಟ್ಟವರೆಲ್ಲ ಹಿಂದೂಗಳೇ ಆಗಿದ್ದಾರಲ್ಲ?
 

ಜನತಾ ಪರಿವಾರ ಒಂದುಗೂಡಿದರೆ ಅದು ಸರಕಾರ ಮಾಡಿದಕ್ಕಿಂತ ದೊಡ್ಡ ಸಾಧನೆ
-ಬಸವರಾಜ ಹೊರಟ್ಟಿ, ಎಂಎಲ್ಸಿ
  ಬಳಿಕ ಸಂಘಪರಿವಾರದ ಜೊತೆ ಸೇರಿ ಸರಕಾರ ರಚಿಸುವುದಕ್ಕಾಗಿಯೇ?
---------------------
  ಜ್ಯೋತಿಷಿಯೊಬ್ಬರು ಗ್ರಹಗತಿ ಸರಿಯಿಲ್ಲವೆಂದು ಉಂಗುರ ತೊಡಲಿಕ್ಕೆ ಹೇಳಿದ್ದಕ್ಕಾಗಿ ಚಿನ್ನದುಂಗುರ ತೊಟ್ಟಿದ್ದೇನೆ
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಆಕಾಶದಲ್ಲಿರುವ ಗ್ರಹಗಳೆಲ್ಲ ಈಗ ದಿಕ್ಕು ಬದಲಿಸಿ ಸುತ್ತ ತೊಡಗಿದೆಯಂತೆ.

---------------------
  ಇಸ್ಲಾಂ ಧರ್ಮದಲ್ಲಿ ಜನ್ಮದಿನ ಆಚರಿಸುವಂತಹ ಪದ್ಧತಿ ಇಲ್ಲ
-ನಳಿನ್ ಕುಮಾರ್ ಕಟೀಲು, ಸಂಸದ
  ಹಾಗೆಂದು ದೇಶ ಗಾಂಧಿ ಜಯಂತಿಯನ್ನು ಆಚರಿಸುತ್ತಿಲ್ಲವೆ?
---------------------
ಕೊಲೆ, ಅತ್ಯಾಚಾರಗಳಂತಹ ಘಟನೆ ಮುಖ್ಯಮಂತ್ರಿಯವರ ಕುಟುಂಬದಲ್ಲಿ ನಡೆದರೆ ಅವರು ಸುಮ್ಮನಿರುತ್ತಿದ್ದರೇ? -ಕೆ.ಎಸ್.ಈಶ್ವರಪ್ಪ, ವಿ.ಪ.ಪ್ರ.ಪ.ನಾಯಕ
  ನಿಮ್ಮ ಕುಟುಂಬದಲ್ಲಿ ಯಾರ ಕೊಲೆ ನಡೆದಿದೆ? ಯಾರ ಮೇಲೆ ಅತ್ಯಾಚಾರ ನಡೆದಿದೆ?
---------------------
  ಭಯೋತ್ಪಾದನೆ ನಿಗ್ರಹಿಸಲೆಂದೇ 500, 1000ರೂ. ನೋಟುಗಳನ್ನು ರದ್ದು ಪಡಿಸಲಾಗಿದೆ
-ಬಾಬಾ ರಾಮ್‌ದೇವ್, ಯೋಗಗುರು
  ನಕಲಿ ಬಾಬಾಗಳಿರುವವರೆಗೆ ನಕಲಿ ಹಣವನ್ನು ತಡೆಯುವುದು ಕಷ್ಟ ಸಾಧ್ಯ.

---------------------
  ನಾನೂ 100ರೂ. ನೋಟಿಗಾಗಿ ಮನೆಯಲ್ಲಿ ಹುಡುಕುತ್ತಿದ್ದೇನೆ
-ಡಿ.ಕೆ.ಶಿವಕುಮಾರ್, ಸಚಿವ
ಬರೇ ಸಾವಿರ ರೂಪಾಯಿ ನೋಟುಗಳಷ್ಟೇ ಗುಡ್ಡೆ ಬಿದ್ದಿರಬೇಕು.

---------------------
  ವಿರೋಧಕ್ಕೆ ಹೆದರಿದರೆ ಸರಕಾರ ನಡೆಸಲು ಸಾಧ್ಯವಿಲ್ಲ
-ಕೆ.ಜೆ.ಜಾರ್ಜ್, ಸಚಿವ
  
ಜನರ ವಿರೋಧಕ್ಕೆ ಹೆದರದೇ ಸರಕಾರ ನಡೆಸುವುದು ಸಾಧ್ಯವಿಲ್ಲ.

---------------------
  ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಾಮೈತ್ರಿಯ ಪ್ರಶ್ನೆಯೇ ಇಲ್ಲ
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಅಧ್ಯಕ್ಷ

ಯಾರೂ ತಮ್ಮ ಪಕ್ಷದ ಜೊತೆಗೆ ಮೈತ್ರಿಗೆ ಸಿದ್ಧವಿಲ್ಲವೆಂದು 
  

share
ಪಿ. ಎ. ರೈ
ಪಿ. ಎ. ರೈ
Next Story
X