ಇಂದು ಅಥವಾ ನಾಳೆ ಎಟಿಎಂಗಳಲ್ಲಿ 2000 ರೂ.ನೋಟು ಲಭ್ಯ

ಹೊಸದಿಲ್ಲಿ, ನ.14: ಇದೀಗ ಎಟಿಎಂಗಳಲ್ಲೂ 2000 ರೂ. ಮುಖಬೆಲೆಯ ನೋಟುಗಳು ಲಭ್ಯವಾಗಲಿವೆ. ಈ ನೋಟುಗಳು ಇಂದು ಅಥವಾ ನಾಳೆ ಜನರ ಕೈಸೇರಲಿದೆ ಎಂದು ಕೇಂದ್ರ ಸರಕಾರ ಸೋಮವಾರ ಘೋಷಿಸಿದೆ.
ಅಂಚೆ ಕಚೇರಿಗಳಿಗೆ ನೋಟುಗಳ ಸರಬರಾಜನ್ನು ಹೆಚ್ಚಿಸಲಾಗುತ್ತದೆ. ವಿಶೇಷ ತಂಡ ಎಟಿಎಂಗಳಲ್ಲಿ ಕೆಲವು ಬದಲಾವಣೆ ಮಾಡಲಿದೆ. 2000 ರೂ. ನೋಟಿಗಾಗಿ ಎಟಿಎಂ ಮಿಶನ್‌ಗಳಲ್ಲಿ ಬದಲಾವಣೆಯ ಅಗತ್ಯವಿದೆ. ಮುಂದಿನ ಕೆಲವೇ ದಿನಗಳಲ್ಲಿ ಹೆಚ್ಚಿನ ಎಟಿಎಂಗಳು ಕಾರ್ಯನಿರ್ವಹಿಸಲಿವೆ’’ ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ನೂತನ 500 ರೂ. ನೋಟುಗಳು ಬ್ಯಾಂಕ್‌ಗಳ ಒತ್ತಡವನ್ನು ತಗ್ಗಿಸಲಿದೆ. ಮಾರುಕಟ್ಟೆಯ ವ್ಯಾಪಾರವನ್ನು ಹೆಚ್ಚಿಸಲಿದೆ.
ಗುರುನಾನಕ್‌ಜಯಂತಿಯ ಹಿನ್ನೆಲೆಯಲ್ಲಿ ದೇಶದ ಹೆಚ್ಚಿನ ಬ್ಯಾಂಕ್‌ಗಳು ಸೋಮವಾರ ಬಂದ್ ಆಗಿದ್ದವು. ಹೀಗಾಗಿ ರವಿವಾರ ರಾತ್ರಿಯೇ ಎಲ್ಲ ಎಟಿಎಂಗಳ ಮುಂದೆ ದೊಡ್ಡ ಕ್ಯೂ ಕಂಡುಬಂದಿದೆ.
Next Story





