ಪೂರ್ವತಯಾರಿಯಿಲ್ಲದೆ ನೋಟು ರದ್ದು: ಸ್ವಾಮಿ ಟೀಕೆ

ಹೊಸದಿಲ್ಲಿ, ನ. 14: 500,1000ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಕೇಂದ್ರಸರಕಾರದ ಕ್ರಮವನ್ನು ಬಿಜೆಪಿಯ ರಾಷ್ಟ್ರೀಯ ಕಾನೂನು ಸಮಿತಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆಂದು ವರದಿಯಾಗಿದೆ.
ಅವ್ಯವಸ್ಥೆ, ಮತ್ತು ನೋಟು ಅಮಾನ್ಯಗೊಳಿಸಿದ ಕ್ರಮ ಭಾರತವನ್ನು ಒಬ್ಬಂಟಿಗೊಳಿಸಿದೆ. ಇದನ್ನು ಜಾರಿಗೊಳಿಸಿದ ಹಣಕಾಸು ಸಚಿವಾಲಯದ ಮುಂದೆ ಒಂದು ಸ್ಪಷ್ಟವಾದ ಚಿತ್ರಣವೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಪೂರ್ವತಯಾರಿಯ ಕೊರತೆ ಇದರಲ್ಲಿದೆ. ಎರಡುವರ್ಷ ಕ್ಕೂ ಅಧಿಕ ಕಾಲದಿಂದ ಅಧಿಕಾರ ನಮ್ಮಕೈಯಲ್ಲಿದೆ.ಆದ್ದರಿಂದ ಹಣಕಾಸು ಸಚಿವಾಲಯ ಶಕ್ತಿಶಾಲಿ ಸಿದ್ಧತೆ ನಡೆಸಿಕೊಳ್ಳಬೇಕಿತ್ತು. ಇದಕ್ಕೆ ಯಾವುದೇ ಸಮರ್ಥನೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ಸೌತ್‌ಚೆನ್ನೈ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಎಂದು ಸ್ವಾಮಿಹೇಳಿದ್ದಾರೆ.
ನೋಟು ಹಿಂಪಡೆದ ಕಾರಣದಿಂದ ಸಾಮಾನ್ಯಜನರಿಗಾದ ತೊಂದರೆಗಳಿಗಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ಜೇಟ್ಲಿ ಹೇಳಿದ್ದರು . ನೋಟು ಬದಲಾಯಿಸಲು ಬ್ಯಾಂಕ್‌ಗೆ ಗಡಿಬಿಡಿಯಲ್ಲಿ ಓಡಬೇಕಾಗಿಲ್ಲ ಎರಡು ಮೂರು ವಾರಗಳಲ್ಲಿ ಎಟಿಎಂಗಳ ಕಾರ್ಯನಿರ್ವಹಣೆಯನ್ನು ಸರಿಪಡಿಸಲಾಗುವುದು ಎಂದು ಜೇಟ್ಲಿ ಜನರನ್ನು ವಿನಂತಿಸಿದ್ದರು ಎಂದು ವರದಿ ತಿಳಿಸಿದೆ.





