ಎಟಿಎಂ ನಲ್ಲಿ ನಿಂತು ಬಸವಳಿದ ಈ ಮಹಿಳೆ ಮಾಡಿದ್ದೇನು ಗೊತ್ತೇ ?
ನಂತರಆಕೆಗೆ ನೇರವಾಗಿ ಎಟಿಎಂ ಎಂಟ್ರಿ !

ಹೊಸದಿಲ್ಲಿ, ನ.14: ದಿನ ಕಳೆಯುತ್ತಿದ್ದಂತೆಯೇ ತಮ್ಮಲ್ಲಿರುವ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ಹೊಸದಕ್ಕೆ ವಿನಿಮಯ ಮಾಡಿಕೊಳ್ಳಲು ಸರತಿ ನಿಲ್ಲುತ್ತಿರುವ ಜನ ಬೇಸತ್ತು ವಿಪರೀತ ಕ್ರಮಗಳನ್ನು ಅನುಸರಿಸಲಾರಂಭಿಸಿದ್ದಾರೆ.
ಹೊಸದಿಲ್ಲಿಯ ಮಯೂರ್ ವಿಹಾರ್ ಫೇಸ್ 3 ಇಲ್ಲಿನ ಎಟಿಎಂ ಒಂದರಲ್ಲಿ ಉದ್ದ ಸರತಿಯಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಬಸವಳಿದು ಹೋಗಿತನ್ನ ಶರ್ಟನ್ನೇ ಬಿಚ್ಚಿ ಪ್ರತಿಭಟಿಸಿ ಅಲ್ಲಿದ್ದ ಇತರರನ್ನು ಸ್ಥಂಭೀಭೂತರನ್ನಾಗಿಸಿದ ಘಟನೆ ವರದಿಯಾಗಿದೆ.
ಘಟನೆಯ ಬಗ್ಗೆ ತಿಳಿದು ಅಲ್ಲಿಗೆ ಧಾವಿಸಿದ ಘಾಝಿಪುರ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಆಕೆಗೆ ಮತ್ತೆ ಬಟ್ಟೆ ತೊಡಿಸಿ ಆಕೆಯನ್ನು ಠಾಣೆಗೆ ಕರೆದೊಯ್ದರು.
ಅಂತೂ ಆ ಮಹಿಳೆಯ ಈ ವಿನೂತನ ಪ್ರತಿಭಟನೆ ತನ್ನ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಆಕೆಯನ್ನುಹತ್ತಿರದ ಎಟಿಎಂ ಗೆ ಕರೆದೊಯ್ದು ಅಲ್ಲಿ ಆಕೆ ತನಗೆ ಬೇಕಾದ ನಗದು ಪಡೆದುಕೊಳ್ಳುವಲ್ಲಿ ಯಶಸ್ವಿಯಾದಳು.
Next Story





