ಟ್ರಂಪ್ ಪದಚ್ಯುತರಾಗುತ್ತಾರೆ ಎಂದ ‘ಪ್ರೆಡಿಕ್ಷನ್ ಪ್ರೊಫೆಸರ್’ !
ಟ್ರಂಪ್ ಗೆಲ್ಲುವ ಭವಿಷ್ಯ ನುಡಿದಿದ್ದರು

ವಾಷಿಂಗ್ಟನ್‌ಡಿಸಿ, ನ.14: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಜಯಗಳಿಸುತ್ತಾರೆ ಎಂದು ಭವಿಷ್ಯನುಡಿದಿದ್ದ ಅದೇ ಪ್ರೊಫೆಸರ್ ಅಲನ್ ಲಿಚ್‌ಮೆನ್ ಟ್ರಂಪ್ ಅಧಿಕಾರದಿಂದ ಹೊರದಬ್ಬಲ್ಪಡಲಿದ್ದಾರೆಂದು ಹೊಸ ಹೇಳಿಕೆಯನ್ನು ನೀಡಿರುವುದಾಗಿ ವರದಿಯಾಗಿದೆ. ಆರೋಪ ವಿಚಾರಣೆಯ ಮೂಲಕ ಅಧ್ಯಕ್ಷರನ್ನು ಅಧಿಕಾರದಿಂದ ಹೊರದಬ್ಬುವ ಪ್ರಕ್ರಿಯೆಗೆ ಇಂಪೀಚ್‌ಮೆಂಟ್ ಹೇಳಲಾಗುತ್ತದೆ. ಪಾರ್ಟಿ ಹೇಳಿದ್ದನ್ನು ಅನುಸರಿಸುವ ಅಧ್ಯಕ್ಷರೇ ರಿಪಬ್ಲಿಕನ್ ಪಾರ್ಟಿಗೆ ಅಗತ್ಯವಿದೆ. ಆದರೆ ಟ್ರಂಪ್‌ರ ವ್ಯಕ್ತಿತ್ವವನ್ನು ಹೀಗೆ ಎಂದು ಸ್ಪಷ್ಟವಾದ ರೀತಿಯಲ್ಲಿ ವಿಶ್ಲೇಷಿಸಲು ಸಾಧ್ಯವಿಲ್ಲ. ಆದ್ದರಿಂದ ಪಾರ್ಟಿಗೆ ಟ್ರಂಪ್‌ನ್ನು ನಿಯಂತ್ರಿಸಲು ಕಷ್ಟವಾಗಬಹದು. ನಂತರ ಅದು ಹೊರಹಾಕುವುದಕ್ಕೆ ಸಮಯವನ್ನು ಹುಡುಕಲಿದೆ ಎಂದು ಲಿಚ್‌ಮೆನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮುನ್ನಡೆ ಸಾಧಿಸಿದ್ದಾರೆ ಎಂದು ಮಾಧ್ಯಮಗಳು ಮತ್ತುಜನರು ನಂಬಿದ್ದಾಗ ಟ್ರಂಪ್ ಗೆಲ್ಲುತ್ತಾರೆ ‘ಪ್ರಡಿಕ್ಷನ್ ಪ್ರೊಫೆಸರ್’ ಲಿಚ್‌ಮೆನ್ ಟ್ರಂಪ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅಧಿಕಾರದಲ್ಲಿರುವ ಪಾರ್ಟಿಯ ಪ್ರದರ್ಶನ ತನ್ನ ಹೇಳಿಕೆಗೆ ಕಾರಣವಾಗಿದೆ ಎಂದು ಲಿಚ್‌ಮೆನ್ ಅಂದುಹೇಳಿದ್ದರು.
ಇದುವರೆಗೂ ಲಿಚ್‌ಮೆನ್ ಹೇಳಿಕೆಗಳು ತಪ್ಪಾಗಿಲ್ಲ. ಆದ್ದರಿಂದ ಈ ಅವರ ಅಭಿಪ್ರಾಯವೂ ನಿಜವಾಗಬಹುದು ಎಂದು ಹೇಳಲಾಗುತ್ತಿದೆ ಎಂದು ವರದಿ ತಿಳಿಸಿದೆ.







