ದುಬೈ: ಡಿ.ಕೆ.ಎಸ್.ಸಿ. 20ನೆ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆ
.gif)
ದುಬೈ, ನ.14: ಡಿ.ಕೆ.ಎಸ್.ಸಿ. ದೇರಾ, ಬಾರ್ ದುಬೈ , ಅಲ್ ಕ್ವಿಸಸ್, ಯೂತ್ ವಿಂಗ್ ಜಂಟಿಯಾಗಿ ಆಯೋಜಿಸಿರುವ ಡಿಕೆಎಸ್‌ಸಿ 20ನೆ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆಯು ದುಬೈಯ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ ಸಭಾಂಗಣದಲ್ಲಿ ನಡೆಯಿತು.
ಸಭೆಯುನ್ನು ಡಿ.ಕೆ.ಎಸ್.ಸಿ. ಯುಎಇ. ರಾಷ್ಟೀಯ ಸಮಿತಿಯ ಗೌರವಾಧ್ಯಕ್ಷ ಸೈಯದ್‌ತ್ವಾಹ ಭಾಪಕಿ ತಂಙಳ್‌ರ ದುಆದೊಂದಿಗೆ ಡಿ.ಕೆ.ಎಸ್.ಸಿ. ಯುಎಇ ರಾಷ್ಟೀಯ ಸಮಿತಿಯ ಸಲಹೆಗಾರ ಸೈಯದ್ ಅಸ್ಗರಲಿ ತಂಙಳ್ ಉದ್ಘಾಟಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಡಿ.ಕೆ.ಎಸ್.ಸಿ ಯುಎಇ ರಾಷ್ಟೀಯ ಸಮಿತಿಯ ಉಪಾಧ್ಯಕ್ಷ ಹಾಜಿ ಎಂ.ಇ.ಮೂಳೂರು ಡಿ.ಕೆ.ಎಸ್.ಸಿ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 14,000ಕ್ಕಿಂತಲೂ ಹೆಚ್ಚು ಸದಸ್ಯರನ್ನೊಳಗೊಂಡಿದೆ. ಇದರ ಅಧೀನದಲ್ಲಿ ಮೂಳೂರು ನ ಅಲ್ ಇಹ್ಸಾನ್ ಎಜ್ಯುಕೇಷನ್ ಸೆಂಟರ್ ಕಾರ್ಯಚರಿಸುತ್ತಿದ್ದು ಇಲ್ಲಿ 1,450ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುವುದರೊಂದಿಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿ.ಸಿ.ಎಫ್. ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಕಾಪು ಮಾತನಾಡಿದರು.
ಡಿ.ಕೆ.ಎಸ್.ಸಿ. ಯುಎಇ ರಾಷ್ಟೀಯ ಸಮಿತಿಯ ಸಲಹೆಗಾರ ಇಬ್ರಾಹೀಂ ಸಖಾಫಿ ಕೆದಂಬಾಡಿ ಮುಖ್ಯ ಭಾಷಣ ಮಾಡಿದರು. ಪ್ರಚಾರ ಸಮಿತಿಯ ಅಧ್ಯಕ್ಷ ಹಾಜಿ ಮೊಯ್ದಿನ್ ಕುಟ್ಟಿ ಕಕ್ಕಿಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೆಸಿಎಫ್ ದುಬೈ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ಕೆಐಸಿ ಯುಎಇ ಕಾರ್ಯಾಧ್ಯಕ್ಷ ಶರೀಫ್, ಸೆಂಟ್ರಲ್ ಕಮಿಟಿ. ಸದಸ್ಯರಾದ ಜಮಾಲುದ್ದೀನ್ ಸ್ವಾಲಿ ಕನ್ನಂಗಾರ್, ಡಿ.ಕೆ.ಎಸ್.ಸಿ. ಮೀಲಾದ್ ಸಮಿತಿಯ ಕೋಶಾಧಿಕಾರಿ ಜೈನುದ್ದೀನ್ ಬೆಳ್ಳಾರೆ, ಡಿಕೆಎಸ್‌ಸಿ ಯುಎಇ ರಾಷ್ಟ್ರೀಯ ಸಮಿತಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಇ.ಕೆ.ಇಬ್ರಾಹೀಂ ಕಿನ್ಯ ಮಾತನಾಡಿ 20ನೇ ವಾರ್ಷಿಕ ಸಮ್ಮೇಳನಕ್ಕೆ ಶುಭ ಹಾರೈಸಿದರು.
ಕರಾವಳಿ ಗ್ರಾಂಡ್ ಫ್ಯಾಮಲಿ ಮುಲಾಖತ್ 2016-17 ಪ್ರವೇಶ ಪತ್ರ ಬಿಡುಗಡೆ
ಡಿಕೆಎಸ್‌ಸಿ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಕರಾವಳಿ ಗ್ರಾಂಡ್ ಫ್ಯಾಮಿಲಿ ಮುಲಾಖಾತ್-2016-17’ ಕಾರ್ಯಕ್ರಮವು ಜನವರಿ 1ರಂದು ನಡೆಯಲಿದೆ ಎಂದು ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮುಲಾಖಾತ್ ಸಮಿತಿಯ ಸಂಚಾಲಕ ಇಕ್ಬಾಲ್ ಹೆಜಮಾಡಿ ಇದೇ ಸಂದರ್ಭ ಘೋಷಿಸಿದರು. ಇದರ ಪ್ರವೇಶ ಪತ್ರವನ್ನು ಸೈಯದ್ ಬಾಫಕಿ ತಂಙಳ್ ಇದೇ ಸಂದರ್ಭ ಬಿಡುಗಡೆಗೊಳಿಸಿದರು. ಇದರ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮುಲಾಖಾತ್ ಸಮಿತಿಯ ಅಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ ಕೋರಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಬಶೀರ್ ಬೊಳ್ವಾರ್, ಉಸ್ಮಾನ್ ಮೂಳೂರು, ಅಝೀಮ್ ಉಚ್ಚಿಲ, ಸುಲೈಮಾನ್ ಮೂಳೂರು, ಅಶ್ರಫ್ ಬಾಳೆಹೊನ್ನೂರು, ಅಬ್ದುಲ್ ಖಾದರ್ ಕಾರ್ಕಳ, ಹಾಜಬ್ಬ ಮೂಳೂರು ಉಪಸ್ಥಿತರಿದ್ದರು.
ಡಿಕೆಎಸ್‌ಸಿ ಅಜ್ಮಾನ್ ಘಟಕದ ಅಧ್ಯಕ್ಷ ಹಸನಬ್ಬ ಕೊಳ್ನಾಡು, ಶಾರ್ಜಾ ಘಟಕದ ಅಧ್ಯಕ್ಷ ಬಶೀರ್ ಕಾಪಿಕ್ಕಾಡ್, ಹೋರ್ ಅಲ್-ಐನ್ ಘಟಕಾಧ್ಯಕ್ಷ ರಫೀಕ್ ಆತೂರು, ಅಬ್ದುಲ್ ಖಾದರ್ ಉಚ್ಚಿಲ, ಹನೀಫ್ ಆರ್ಯಮೂಲೆ, ಅಬ್ದುಲ್ಲಾ ಹಾಜಿ ಬೀಜಾಡಿ, ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್, ಅಬ್ಬಾಸ್ ಪಾಣಾಜೆ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಅಝೀಝ್ ಲತೀಫಿ, ಖಾಸಿಂ ಮದನಿ ತೆಕ್ಕಾರು, ಹಮೀದ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು
ಬಾರ್ ದುಬೈ ಘಟಕದ ಅಧ್ಯಕ್ಷ ಇಸ್ಮಾಯೀಲ್ ಬಾಬಾ ಮೂಳೂರು, ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಝುಬೈರ್ ಆತೂರು, ಅಲ್ ಕ್ವಿಸಸ್ ಘಟಕದ ಪ್ರಧಾನ ಕಾರ್ಯದರ್ಶಿ ಶೇಕಬ್ಬ ಕಿನ್ಯ, ನವಾಝ್ ಕೋಟೆಕ್ಕಾರ್ ಅಬ್ದುಲ್ ರಹಿಮಾನ್ ಸಜಿಪ, ಹಂಝ ಮೂಳೂರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಡಿಕೆಎಸ್‌ಸಿ 20 ವರ್ಷದ ಅವಲೋಕನವನ್ನು ಯೂತ್ ವಿಂಗ್‌ನ ರಿಝ್ವನ್ ಹಾಗೂ ರಿಯಾಝ್ ಕಿನ್ಯ ಅವರು ಪ್ರಾಜೆಕ್ಟರ್ ಮೂಲಕ ಸಭೆಗೆ ವಿವರಿಸಿದರು.
ಡಿಕೆಎಸ್‌ಸಿ ದೇರಾ ಘಟಕದ ಅಧ್ಯಕ್ಷ ಇಬ್ರಾಹೀಂ ಹಾಜಿ ಕಿನ್ಯ ಕಿರಾಅತ್ ಪಠಿಸಿದರು. ಡಿಕೆಎಸ್‌ಸಿ ದೇರಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್‌ಅರ್ಲಪದವು ಸ್ವಾಗತಿಸಿದರು. ಬಾರ್ ದುಬೈ ಘಟಕದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕಳತ್ತೂರು ವಂದಿಸಿದರು. ಯೂತ್ ವಿಂಗ್‌ನ ಕಮಲ್ ಅಜ್ಜಾವರ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಎಸ್.ಯೂಸುಫ್ ಆರ್ಲಪದವು







