ಕೇರಳದ ವಿದ್ಯಾರ್ಥಿಗಳು ಕೊಡೈಕೆನಾಲ್‌ನಲ್ಲಿ ಉಸಿರುಗಟ್ಟಿ ಸಾವು
.jpg)
ಆಲಪ್ಪುಝ,ನ. 14: ಕೊಡೈಕೆನಾಲ್‌ಗೆ ಪ್ರವಾಸ ಹೋಗಿದ್ದ ಇಬ್ಬರು ಕೇರಳ ವಿದ್ಯಾರ್ಥಿಗಳು ಹೊಟೇಲ್ ಕೋಣೆಯಲ್ಲಿ ಉಸಿರುಗಟ್ಟಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಆಲಪ್ಪುಝ ತಿರುವಂಬಾಡಿಯ ಥಾಮಸ್ ಚೆರಿಯನ್(21) ಮುಕ್ತಣಿಯಾಂಕುಳಂನ ವಿಪಿನ್(26) ಮೃತರಾದ ವಿದ್ಯಾಥಿಗಳೆಂದು ಗುರುತಿಸಲಾಗಿದೆ.
ಕೊಡೈಕೆನಾಲ್ ಸಮೀಪದ ವಟ್ಟಕನಲ್‌ನ ಹೊಟೇಲ್‌ನ ಕೋಣೆಯಲ್ಲಿ ಉಸಿರುಗಟ್ಟಿ ಮೃತರಾದ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದ್ದು, ಹನ್ನೆರಡು ಮಂದಿಯ ತಂಡ ಪ್ರವಾಸ ಹೋಗಿತ್ತು ಎನ್ನಲಾಗಿದೆ.
ಆಹಾರ ತಯಾರಿಸುವಾಗ ಕಲ್ಲಿದ್ದಲಿನಿಂದ ವಿಷವಾಯು ಹೊರಬಂದಪರಿಣಾಮವಿದ್ಯಾರ್ಥಿಗಳು ಮೃತರಾಗಿಬೇಕೆಂದು ಶಂಕಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story





