ಉದ್ಯೋಗದ ಬಗ್ಗೆ ಕೀಳರಿಮೆ ಬೇಡ: ಸಿಐ ಕೃಷ್ಣಯ್ಯ
ಸುಳ್ಯದಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ಸುಳ್ಯ, ನ.14: ಸಂಘಟನೆಗಳ ಮೂಲಕ ಗುರುತಿಸಿಕೊಂಡು ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಿ. ಉದ್ಯೋಗದ ಬಗ್ಗೆ ಕೀಳರಿಮೆ ಬೇಡ. ಇದರಿಂದ ತಮ್ಮ ವೃತ್ತಿಗೆ ಗೌರವ ಸಲ್ಲುತ್ತದೆ ಎಂದು ಸುಳ್ಯ ವೃತ್ತ ನಿರೀಕ್ಷಕ ವಿ.ಕೃಷ್ಣಯ್ಯ ಹೇಳಿದರು.
ಅವರು ರವಿವಾರ ಸುಳ್ಯ ಲಯನ್ಸ್ ಸೇವಾಸದನದಲ್ಲಿ ನಡೆದ ಕರ್ನಾಟಕ ರಾಜ್ಯ ಸುಳ್ಯ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಇದರ ವತಿಯಿಂದ 2ನೆ ಹಂತದ ಕಾರ್ಮಿಕ ಜಾಗೃತಿ ಅಭಿಯಾನದ ಉದ್ಘಾಟನೆ ಮತ್ತು ಗುತ್ತಿಗೆದಾರ, ಮೇಸ್ತ್ರಿ ಕಾರ್ಮಿಕರಿಗೆ ಪ್ರಮಾಣ ಬೋಧನಾ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಕೆ.ಪಿ.ಜಾನಿ ವಹಿಸಿ, ಸಂಘಟನೆಯ ಮಹತ್ವವನ್ನು ತಿಳಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಸಂಘಟನೆಯ ಸದಸ್ಯತ್ವ ಪಡೆದುಕೊಳ್ಳಿ ಎಂದ ಅವರು ಸರಕಾರದಿಂದ ಸಿಗುವ ಸವಲತ್ತುಗಳ ವಿವರ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಬಜಾಲ್ ಪ್ರಮಾಣ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹರೀಶ್ ಬಂಟ್ವಾಳ್, ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಜೀವನ್ ನಾರ್ಕೋಡು, ಸಿವಿಲ್ ಗುತ್ತಿಗೆದಾರ ರವಿ ಕಕ್ಕೆಪದವು, ಗುತ್ತಿಗೆದಾರ ಗೋಪಾಲಕೃಷ್ಣ, ಇಂಜಿನಿಯರ್ ಡಿ.ಎಂ.ಸುಮಿತ್ರ, ಕೆಂಪು ಕಲ್ಲಿನ ಮಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅಳಂಕಲ್ಯ, ಹಿರಿಯ ಗುತ್ತಿಗೆದಾರ ನೆಲ್ಸನ್ ಪಿ.ವಿ., ಲಾರಿ ಮಾಲಕ ಚಾಲಕರ ಸಂಘದ ಖಜಾಂಜಿ ಗೋಪಾಲಕೃಷ್ಣ ಪೊಸವಳಿಗೆ, ಸಂಘಟನ ಪ್ರಧಾನ ಕಾರ್ಯದರ್ಶಿ ಬಿಜು ಅಗಸ್ಟಿನ್, ಖಜಾಂಜಿ ಶಿವರಾಮ ಗೌಡ, ಜಿಲ್ಲಾ ಪ್ರತಿನಿಧಿ ಜನಾರ್ದನ ಆಚಾರ್ಯ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಾರಾಯಣ ಮೇಸ್ತ್ರಿ, ನಾಗರಾಜ ಮೇಸ್ತ್ರಿ, ಕೃಷ್ಣ ಮೇಸತ್ರಿ, ವಿಜಯ ಮೇಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು. ಜಯಂತ ಕೇರ್ಪಳ ನಿರೂಪಿಸಿದರು. ಉಸ್ಮಾನ್ ಸ್ವಾಗತಿಸಿ, ವಂದಿಸಿದರು.







