ದೇಶದಲ್ಲಿ ಕಾರ್ಬನ್ ಹೊರಸೂಸುವಿಕೆ ಪ್ರಮಾಣ ಎಷ್ಟಿದೆ? ಚೀನಾದ ಪರಿಸ್ಥಿತಿ ಏನು ?

ಲಂಡನ್, ನ.14: ಪಳೆಯುಳಿಕೆ ಇಂಧನ ಉರಿತದಿಂದ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣ ಭಾರತದಲ್ಲಿ ಶೇ.5.2ರಷ್ಟು ಹೆಚ್ಚಾಗಿದ್ದರೆ, ಚೀನದಲ್ಲಿ ಅದು 2015ರಲ್ಲಿ ಶೇ.0.7ರಷ್ಟು ಕಡಿಮೆಯಾಗಿದೆಯೆಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ಸತತ 3 ವರ್ಷಗಳಿಂದ ಜಾಗತಿಕ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆಯ ಪ್ರಮಾಣ ಬದಲಾಗದೆ ಉಳಿದಿದೆಯೆಂದು ಅದು ಹೇಳಿದೆ.
ಭಾರತದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಚುವಿಕೆಯ ಪ್ರಮಾಣ ಶೇ.5.2ರಷ್ಟು ಏರುವುದರೊಂದಿಗೆ, ಎಲ್ಲ ಜಾಗತಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗಳಿಗೆ ಶೇ.6.3ರಷ್ಟು ಕೊಡುಗೆ ನೀಡಿದೆ. 2015ರಲ್ಲಿ ಇಂಗಾಲದ ಡೈಆಕ್ಸೈಡ್ ಹೊರ ಸೂಸುವಿಕೆಯ ಪ್ರಮಾಣ ಅತ್ಯಂತ ಹೆಚ್ಚಾಗಿತ್ತೆಂದು ಬ್ರಿಟನ್‌ನ ಈಸ್ಟ್ ಆಂಗ್ಲಿಯ ವಿಶ್ವವಿದ್ಯಾನಿಲಯ ಹಾಗೂ ಜಾಗತಿಕ ಇಂಗಾಲ ಯೋಜನೆಗಳ ಸಂಶೋಧಕರು ತಿಳಿಸಿದ್ದಾರೆ.
ಪಳೆಯುಳಿಕೆ ಇಂಧನ ದಹನದಿಂದ ಜಾಗತಿಕ ಇಂಗಾಲ ಹೊರಸೂಸುವಿಕೆಯು 2015ರಲ್ಲಿ ಹೆಚ್ಚಾಗಿರಲಿಲ್ಲ. 2016ರಲ್ಲಿ ಸ್ವಲ್ಪವಷ್ಟೇ ಹೆಚ್ಚಾಗಬಹುದೆಂದು ಬಿಂಬಿಸಲಾಗಿದೆ. ಅಂದರೆ 3 ವರ್ಷಗಳಲ್ಲಿ ಅದು ಏರಿಕೆಯಾಗದೆ ನಿಂತಿಕೆಯೆಂದು ಅವರು ಹೇಳಿದ್ದಾರೆ.
2013ರ ವರೆಗಿನ ದಶಕದಲ್ಲಿ ಕಾರ್ಬನ್ ಹೊರಸೂಸುವಿಕೆ ವರ್ಷಕ್ಕೆ ಶೇ.2.3ರಷ್ಟು ಏರುತ್ತಿತತು. 2014ರಲ್ಲಿ ಅದು ಕೇವಲ ಶೇ.0.7ರಷ್ಟು ಹೆಚ್ಚಳವಾಗಿತ್ತು. 2016ರಲ್ಲಿ ನಿರೀಕ್ಷಿತ ಏರಿಕೆ ಕೇವಲ ಶೇ.0.2ರಷ್ಟಾಗಿದ್ದು, ಇಂಗಾಲ ಹೊರಸೂಸುವಿಕೆಯ ವೇಗದ ಹೆಚ್ಚಳಕ್ಕೆ ವಿರಾಮ ದೊರೆಯಲಿದೆ.







