ಪಾರಾಲಿಂಪಿಯನ್ ರೇವತಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ
ಮಕ್ಕಳ ದಿನಾಚರಣೆ

ಹೊಸದಿಲ್ಲಿ, ನ.14: ಕರ್ನಾಟಕದ ದಾವಣಗೆರೆ ಜಿಲ್ಲೆಯ ರೈತನೊಬ್ಬನ ಪುತ್ರಿ, ಪಾರಾಲಿಂಪಿಯನ್ ರೇವತಿ ನಾಯಕ್.ಎಂ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ವಿಶೇಷ ಸಾಧನೆಗಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಯ ಅಂಗವಾಗಿ ಚಿನ್ನದ ಪದಕ ಪಡೆದಿದ್ದಾಳೆ
ತನ್ನ ಈ ಸಾಧನೆಗೆ ತಂದೆಯೇ ಸ್ಫೂರ್ತಿಯೆಂದು ಆಕೆ ಹೇಳಿದ್ದಾಳೆ.
ಕೇವಲ 8ರ ಹರೆಯದಲ್ಲಿದ್ದಾಗ ಈಜುಗಾರಿಕೆ ಆರಂಭಿಸಿದ್ದ ರೇವತಿ, ತನ್ನ ಗ್ರಾಮದ ಅಣೆಕಟ್ಟೊಂದರ ಕಾಲುವೆಯನ್ನು ತನ್ನ ಈಜುಕೊಳವನ್ನಾಗಿಸಿಕೊಂಡಿದ್ದಳು. ಬಳಿಕ, ಅಣೆಕಟ್ಟಿನ ಮುಚ್ಚುಗಡೆ, ಆಕೆಯ ಕನಸು ನನಸಾಗದೇನೋ ಎಂಬ ಬೆದರಿಕೆಯೊಡ್ಡಿತ್ತು.
ಆದರೆ, ಅದಾಗಲು ರೇವತಿಯ ತಂದೆ ಬಿಡಲಿಲ್ಲ. ಆಕೆಗೆ ಆಧುನಿಕ ಕ್ರೀಡಾ ಸೌಲಭ್ಯ ದೊರೆಯುವಂತಾಗಲು ಅವರು ಆ ಊರನ್ನೇ ಬಿಟ್ಟರು.
ದೇಶಕ್ಕಾಗಿ ಕ್ರೀಡಾಳುಗಳನ್ನು ಸೃಷ್ಟಿಸುವುದೇ ತನ್ನ ಕನಸಾಗಿತ್ತೆಂದು ರೇವತಿಯ ತಂದೆ ಮಂಜುನಾಥ್ ಹೇಳಿದ್ದಾರೆ. ಅವರು ಮಾಜಿ ಅಥ್ಲೀಟ್ ಆಗಿದ್ದು, ತನ್ನ ಮೂವರು ಮಕ್ಕಳನ್ನು ಕ್ರೀಡಾಳುಗಳಾಗಿ ಬೆಳೆಸುತ್ತಿದ್ದಾರೆ.
Next Story





