ಕಲ್ಲಾಪು: ಹೊಸ ನೋಟಿನ ಝೆರಾಕ್ಸ್ ಪ್ರತಿ ನೀಡಿ ವಂಚನೆ

ಮಂಗಳೂರು, ನ.14: ರಾ.ಹೆ. 66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಮೀನು ವ್ಯಾಪಾರಿಯೊಬ್ಬರಿಗೆ 2 ಸಾವಿರ ರೂಪಾಯಿಯ ಹೊಸ ನೋಟಿನ ಝೆರಾಕ್ಸ್ ಪ್ರತಿ ನೀಡಿ ವಂಚಿಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಟೆಂಪೊವೊಂದರಲ್ಲಿ ಮೀನು ಮಾರುತ್ತಿದ್ದ ಮುಸ್ತಫಾ ಎಂಬವರ ಬಳಿ ಬಂದ ಗ್ರಾಹಕನೊಬ್ಬ 700 ರೂ.ನ ಮೀನನ್ನು ಖರೀದಿಸಿ 2 ಸಾವಿರ ರೂ.ನ ನೋಟು ನೀಡಿದ. ಗಡಿಬಿಡಿಯಲ್ಲಿ ಅದನ್ನು ಪರಿಶೀಲಿಸದ ಮುಸ್ತಫಾ ಸಂಜೆ ವ್ಯಾಪಾರ ಮುಗಿಸಿದ ಬಳಿಕ ನೋಟಿನ ಬಗ್ಗೆ ಸಂಶಯಗೊಂಡರು. ಯಾರೋ ಹೊಸ ನೋಟನ್ನು ಝೆರಾಕ್ಸ್ ಮಾಡಿ ವಂಚಿಸಿದ್ದಾರೆ. ಘಟನೆಯ ಬಗ್ಗೆ ಅವರು ಉಳ್ಳಾಲ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಆದರೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
Next Story





