ಕಿನ್ಯ ಸರಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಮಂಗಳೂರು, ನ.14: ಕಿನ್ಯ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಉಕ್ಕುಡ ಇಲ್ಲಿನ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ಜವಾಹರಲಾಲ್ ನೆಹರೂರವರ 127ನೆಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್‌ರಿಗೆ ಉ. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಪಿ.ಐ.ಅಹ್ಮದ್ ಬಾವ ಶಾಲಾ ತಡೆಗೋಡೆಗೆ ಮನವಿ ಸಲ್ಲಿಸಿದರು. ಶಾಲಾ ಮಕ್ಕಳ ನಾಯಕ ಮುಹಮ್ಮದ್ ರಾಫಿ ಅಧ್ಯಕ್ಷತೆ ವಹಿಸಿದರು. ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸಿರಾಜುದ್ದೀನ್ ಕಿನ್ಯ ಮಾತನಾಡಿದರು.
ಸ್ಥಳೀಯ ಯುವ ನಾಯಕ ಫಾರೂಕ್ ಕಿನ್ಯ ಸ್ವಾಗತಿಸಿದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಕುಸುಮಾ, ಆಶಾಲತಾ,ಹಾಗೂ ಖಿದ್ಮತುಲ್ ಇಸ್ಲಾಂ ಸಂಘದ ಅಧ್ಯಕ್ಷ ಸಲೀಂ ಉಕ್ಕುಡ ,ಧರ್ಮ ಗುರುಗಳಾದ ಕಾಸಿಂ ದಾರಿಮಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು.
Next Story