ಜೂಜಾಟ: 10 ಮಂದಿಯ ಸೆರೆ
ಕಾರ್ಕಳ, ನ.14: ದುರ್ಗಾ ಗ್ರಾಮದ ಬೊಂಬೆತಡ್ಕ ಫಾಲ್ಸ್ ಬಳಿ ನ.13 ರಂದು ಸಂಜೆ ಇಸ್ಪೀಟು ಜುಗಾರಿ ಆಡುತ್ತಿದ್ದ ನಿತಿನ್, ರಾಜೇಶ್, ಮನೋಜ್, ಸುನೀಲ್ ಹೆಗ್ಡೆ, ಇಸಾಕ್, ಮಂಜುನಾಥ್ ದೇವಾಡಿಗ ಎಂಬವರನ್ನು ಪೊಲೀಸರು ಬಂಧಿಸಿ, 2,260 ರೂ. ನಗದು, 4 ಬೈಕ್‌ಗಳು ಹಾಗೂ ಒಂದು ಮಾರುತಿ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕಂಡ್ಲೂರು ಶ್ರೀರಾಮ ಭಜನಾ ಮಂದಿರದ ಬಳಿ ನ.13 ರಂದು ಸಂಜೆ ಅಂದರ್‌ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕಂಡ್ಲೂರಿನ ರಾಘವೇಂದ್ರ(30), ಗಣೇಶ್ ನಾಯ್ಕಿ(42), ಹಳ್ನಾಡಿನ ಲವ(42), ಗುಲ್ವಾಡಿಯ ಜಯರಾಮ ದೇವಾಡಿಗ(32) ಎಂಬವರನ್ನು ಬಂಧಿಸಿ, 3,540ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





