ಅತ್ಯಧಿಕ ತಾಪಮಾನದ ವರ್ಷವಾಗಲಿದೆ 2016
ಲಂಡನ್, ನ.14: ಅತ್ಯಧಿಕ ತಾಪಮಾನದ ವರ್ಷವೆಂಬ ಕಳೆದ ವರ್ಷದ ದಾಖಲೆಯನ್ನು 2016ನೆ ಇಸವಿಯು ಶೀಘ್ರವೇ ಮುರಿಯಲಿದೆ. ಕಳೆದ 9 ತಿಂಗಳುಗಳ ಲ್ಲಿ ಸಂಗ್ರಹಿಸಿದ ದತ್ತಾಂಶಗಳಿಂದ ವಿಜ್ಞಾನಿಗಳು 2016ನೆ ಇಸವಿಯು ಅತ್ಯಂತ ತಾಪಮಾನದ ವರ್ಷವಾಗಲಿದೆಯೆಂಬುದು ಶೇ.90ರಷ್ಟು ಖಚಿತವಾಗಿದೆ.
ಈ ವರ್ಷದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಾಗತಿಕ ಉಷ್ಣಾಂಶವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.2 ಸೆಂಟಿಗ್ರೇಡ್ ಅಧಿಕವಾಗಿತ್ತೆಂದು ವಿಶ್ವ ಹವಾಮಾನ ಸಂಘಟನೆ (ಡಬ್ಲೆುಂಓ) ಹೇಳಿದೆ. ಆನಂತರದ 4 ತಿಂಗಳುಗಳಲ್ಲಿ ಅದು, ಅತ್ಯಧಿಕ ತಾಪಮಾನದ ವರ್ಷವೆಂಬ 2015ರ ದಾಖಲೆಯನ್ನು ಮುರಿಯುವುದು ಖಚಿತವಾಗಿದೆ.
Next Story





