ಪನಾಮಾ ಹಗರಣ: ಶರೀಫ್ ಕುಟುಂಬದ ವಿರುದ್ಧ ಕೋರ್ಟ್‌ಗೆ ಪುರಾವೆ ನೀಡಿದ ಇಮ್ರಾನ್
ಇಸ್ಲಾಮಾಬಾದ್,ನ.14: ಪನಾಮಾ ದಾಖಲೆಪತ್ರಗಳ ಸೋರಿಕೆ ಹಗರಣಕ್ಕೆ ಸಂಬಂಧಿಸಿ ಪಾಕ್ ಪ್ರಧಾನಿ ನವಾಝ್ ಶರೀಫ್ ವಿರುದ್ಧದ ಪುರಾವೆಗಳನ್ನು ಮಾಜಿ ಕ್ರಿಕೆಟಿಗ ಹಾಗೂ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್ ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. 1988ರಿಂದೀಚೆಗೆ ನವಾಝ್ ಶರೀಫ್ ಕುಟುಂಬವು ಅಕ್ರಮ ಉದ್ಯಮಗಳ ಮೂಲಕ 145 ದಶಲಕ್ಷ ಡಾಲರ್‌ಗೂ ಅಧಿಕ ಕಪ್ಪುಹಣವನ್ನು ಬಿಳುಪುಗೊಳಿಸಿರುವುದಾಗಿ ಇಮ್ರಾನ್ ಆರೋಪಿಸಿದ್ದಾರೆ.
ಶರೀಫ್ ಕುಟುಂಬ ಪನಾಮಾದ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳು ಹಾಗೂ ಅವರ ಸಾಲ ವಜಾಕ್ಕೆ ಸಂಬಂಧಿಸಿದ್ದೆಂದು ಹೇಳಲಾದ ಕೆಲವು ದಾಖಲೆಪತ್ರಗಳನ್ನು ಪಾಕಿಸ್ತಾನ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾದ ಖಾನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Next Story





