ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ 18 ಎಟಿಎಂ ಸ್ಥಾಪನೆ
ಹೊಸದಿಲ್ಲಿ, ನ.14: ದೊಡ್ಡ ನೋಟು ರದ್ದತಿಯಿಂದ ಸಂದರ್ಶಕರಿಗಾಗುವ ನಗದು ಕೊರತೆಯನ್ನು ನೀಗಿಸುವ ಸಲುವಾಗಿ ಇಂದಿಲ್ಲಿ ಆರಂಭವಾದ ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (ಐಐಟಿಎಫ್) ವಿವಿಧ ಬ್ಯಾಂಕ್‌ಗಳು 18 ಎಟಿಎಂ ಕಿಯೋಸ್ಕ್‌ಗಳನ್ನು ಸ್ಥಾಪಿಸಿವೆ.
ಸರಕಾರವು ರೂ. 500 ಹಾಗೂ 1000ದ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆಯಲು ನಿರ್ಧರಿಸಿದ ಮರುದಿನ, ನ.9ರಂದು ಹೆಚ್ಚು ಎಟಿಎಂ ಸ್ಥಾಪನೆಯ ನಿರ್ಧಾರ ಕೈಗೊಳ್ಳಲಾಯಿತೆಂದು ಭಾರತದ ವ್ಯಾಪಾರ ಉತ್ತೇಜನ ಸಂಘಟನೆಯ (ಐಟಿಪಿಒ) ಸಿಎಂಡಿ, ಎಲ್.ಸಿ.ಗೋಯೆಲ್ ಪಿಟಿಐಗೆ ತಿಳಿಸಿದ್ದಾರೆ. ಐಟಿಪಿಒ, ನ.14ರಿಂದ 27ರವರೆಗೆ ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆಯುವ ಬೃಹತ್ ವ್ಯಾಪಾರ ಮೇಳದ ಸಂಘಟಕ ಸಂಸ್ಥೆಯಾಗಿದೆ. ಕಳೆದ ವರ್ಷ ಬೇರೆ ಬೇರೆ ಬ್ಯಾಂಕ್‌ಗಳು ವ್ಯಾಪಾರ ಮೇಳದಲ್ಲಿ 7 ಎಟಿಎಂ ಕಿಯೋಸ್ಕ್‌ಗಳನ್ನು ಸ್ಥಾಪಿಸಿದರು. ಈ ಬಾರಿ 18 ಎಟಿಎಂಗಳನ್ನು ಸ್ಥಾಪಿಸಲಾಗಿದೆಯೆಂದು ಗೋಯೆಲ್ ಹೇಳಿದ್ದಾರೆ.
Next Story





