Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದು 500 ಕೋಟಿಯ ಮದುವೆ!

ಇದು 500 ಕೋಟಿಯ ಮದುವೆ!

ಖರ್ಚನ್ನು ಚೆಕ್ ಮೂಲಕ ಪಾವತಿಸುತ್ತಿದ್ದಾರೆಯೇ ಜನಾರ್ದನ ರೆಡ್ಡಿ ?

ಅನ್ನಾ ಇಸಾಕ್ಅನ್ನಾ ಇಸಾಕ್15 Nov 2016 10:37 AM IST
share
ಇದು 500 ಕೋಟಿಯ ಮದುವೆ!
  •  ನೋಟು ರದ್ದತಿಯಿಂದ ರೆಡ್ಡಿ ಮೇಲೆ ಪರಿಣಾಮವೇ ಇಲ್ಲ 
  •  ಬೆಂಗಳೂರಿನಲ್ಲಿ ಕಂಡು ಕೇಳರಿಯದ ವೈಭವದ ಮದುವೆಗೆ ಸಜ್ಜು 
  •  ಮದುವೆ ಮನೆಯಲ್ಲ, ಅರಮನೆ ಇದು, ಇಲ್ಲಿ ಇಲ್ಲದ್ದೂ ಯಾವುದೂ ಇಲ್ಲ 
  •  ಕೋಟಿ ಕೋಟಿಗಳಿಗಿಲ್ಲಿಲ್ಲ ಯಾವುದೇ ಬೆಲೆ 

1000 ಹಾಗೂ 500 ರೂಪಾಯಿ ನೋಟು ಚಲಾವಣೆ ರದ್ದತಿ ನಿರ್ಧಾರದಿಂದ ದೇಶಾದ್ಯಂತ ನಗದು ಸಂಕಷ್ಟ ಸ್ಥಿತಿ ಎದುರಾಗಿದ್ದರೆ, ಬಹುಶಃ ಇದರ ಬಿಸಿ ತಟ್ಟದ ಏಕೈಕ ಕುಟುಂಬ ಎಂದರೆ ಗಣಿ ದಣಿ ಗಾಲಿ ಜನಾರ್ದನ ರೆಡ್ಡಿ ಕುಟುಂಬ.
ಹಲವು ಅವ್ಯವಹಾರ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತ್ರ ತಮ್ಮ ಮಗಳು ಬ್ರಹ್ಮಿಣಿ ವಿವಾಹದ ಅದ್ದೂರಿ ಸಿದ್ಧತೆಯಲ್ಲಿ ಮಾತ್ರ ರಾಜಿಯೂ ಮಾಡಿಕೊಂಡಿಲ್ಲ. ಬೆಂಗಳೂರಿನ ಇತಿಹಾಸದಲ್ಲೇ ಕಂಡು ಕೇಳರಿಯದ ಬೃಹತ್ ಹಾಗೂ ವೈಭವೋಪೇತ ವಿವಾಹಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ಕೈಯಲ್ಲಿ ನಗದು ಇಲ್ಲದೇ ಬೆಂಗಳೂರಿನ ಬ್ಯಾಂಕುಗಳ ಮುಂದೆ ಜನ ಸಾಲುಗಟ್ಟಿ ನಿಂತು, ಅನ್ನ- ಆಹಾರಕ್ಕೂ ಹಾಹಾಕಾರ ಎದ್ದಿದ್ದರೆ, ಜನಾರ್ದನ ರೆಡ್ಡಿ ಮಾತ್ರ 500 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಆಡಂಬರದ ವಿವಾಹಕ್ಕೆ ವೆಚ್ಚ ಮಾಡುತ್ತಿದ್ದಾರೆ. ನಾಲ್ಕು ದಿನಗಳ ವರ್ಣನಾತೀತ ಜಾತ್ರೆ ನವೆಂಬರ್ 12ರಂದು ಮೆಹಂದಿಯೊಂದಿಗೆ ಆರಂಭವಾಗಿದ್ದು, ನವೆಂಬರ್ 16ರಂದು ವಿವಾಹ ಮಹೋತ್ಸವವಿದೆ.

500 ಕೋಟಿ ಏಕೆ?

ಈ ಅದ್ದೂರಿ ವಿವಾಹಕ್ಕೆ 26 ಎಕರೆ ವಿಶಾಲವಾದ ಬೆಂಗಳೂರು ಅರಮನೆ ಮೈದಾನದಲ್ಲಿ ವಿಜಯ ನಗರ ಅರಸ ಕೃಷ್ಣದೇವರಾಯನ ವೈಭವೋಪೇತ ಅರಮನೆಯ ಮರುಸೃಷ್ಟಿಯಾಗಿದೆ. ಹೈದರಾಬಾದ್ ಮೂಲದ ಉದ್ಯಮಿ, ವರ ರಾಜೀವ್ ರೆಡ್ಡಿ, ಹಂಪಿಯ ವಿಜಯ ವಿಠಲ ದೇವಾಲಯವನ್ನು ಹೋಲುವ ಕಲ್ಯಾಣ ಮಂಟಪದಲ್ಲಿ ಬ್ರಹ್ಮಿಣಿ ಕುತ್ತಿಗೆಗೆ ತಾಳಿ ಕಟ್ಟಲಿದ್ದಾರೆ ಎಂದು ಬಿಟಿವಿ ವರದಿ ಮಾಡಿದೆ. ತಿರುಪತಿ ತಿರುಮಲ ದೇವಸ್ಥಾನದ ಎಂಟು ಮಂದಿ ಅರ್ಚಕರು ಈ ಅದ್ದೂರಿ ವಿವಾಹದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು ಎಂದು ಇಂಡಿಯಾ ಟುಡೇ ಬಹಿರಂಗಪಡಿಸಿದೆ.
ಆದರೆ ಯಾವ ರಾಜಗಾಂಭೀರ್ಯದ ವಿವಾಹವೂ ಅರಮನೆ ಇಲ್ಲದಿದ್ದರೆ ಅಪೂರ್ಣ. ಇದಕ್ಕಾಗಿಯೇ ವಿಜಯನಗರದ ಅರಸ ಕೃಷ್ಣದೇವರಾಯನ ಅರಮನೆಯ ವೈಭವಗಳನ್ನು ಒಳಗೊಂಡ ಪ್ರತಿಕೃತಿ ಕಮಲಸೌಧ (ಲೋಟಸ್ ಮಹಲ್) ಹಾಗೂ ಮಹಾನವಮಿ ದಿಬ್ಬವನ್ನು ಸೃಷ್ಟಿಸಲಾಗಿದೆ. ಇದಕ್ಕಾಗಿ ಬಾಲಿವುಡ್ ಖ್ಯಾತನಾಮರಾದ ಕಲಾ ನಿರ್ದೇಶಕರು ಹಾಗೂ 100ಕ್ಕೂ ಹೆಚ್ಚು ಮಂದಿ ಸಹಾಯಕರು ಹಲವು ದಿನಗಳ ಕಾಲ ಶ್ರಮಿಸಿದ್ದಾರೆ.
ಜನಾರ್ದನ ರೆಡ್ಡಿ ಹೇಳಿಕೊಂಡಿರುವಂತೆ ’ಸರಳ’ ಪರಿಕಲ್ಪನೆ ಇಲ್ಲಿ ಮಾಯವಾಗಿದೆ. ಇದರ ಜತೆಗೆ ಬಿಜೆಪಿಯ ಮಾಜಿ ಸಚಿವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಬೆಳಗಾವಿಯಲ್ಲಿದ್ದ "ಹಳೆ ಮನೆ" ಕೂಡಾ ಸೃಷ್ಟಿಯಾಗಿದ್ದು, ಇಲ್ಲಿ ಕನ್ಯಾ ಸಮರ್ಪಣೆ ಸಮಾರಂಭ ನಡೆಯಲಿದೆ.
ಈ ಮಾಯಾಲೋಕಕ್ಕೆ ಆನೆ, ಒಂಟೆ ಹಾಗೂ ಅಸಂಖ್ಯಾತ ರಥಗಳು ವಿಶಿಷ್ಟ ಮೆರುಗು ನೀಡಲಿವೆ. ಭೋಜನಗೃಹ ಮಾತ್ರ ಬಳ್ಳಾರಿಯ ಸಾಂಪ್ರದಾಯಿಕ ಹಳ್ಳಿಯ ರೂಪದಲ್ಲಿ ನಿರ್ಮಾಣವಾಗಿದೆ.
ಈ ವರ್ಷದ ವಿವಾಹದಲ್ಲಿ ಬಾಲಿವುಡ್‌ನ ಕಿಂಗ್ ಖಾನ್ ಶಾರುಕ್ ಖಾನ್ ಹಾಗೂ ಪ್ರಭುದೇವ್ ಅವರ ಪ್ರದರ್ಶನವೂ ಇರಲಿದೆ ಎಂಬ ವದಂತಿ ಇದೆ. ಆಲಿಯಾ ಭಟ್ ಹಾಗೂ ವರುಣ್ ದೇವನ್, ಟಾಲಿವುಡ್‌ನ ರಾಕುಲ್ ಪ್ರೀತ್ ಸಿಂಗ್, ಪ್ರಿಯಾಮಣಿ, ಹಾಸ್ಯನಟ ಬ್ರಹ್ಮಾನಂದಮ್ ಹಾಗೂ ಅಲಿ ಸಾಥ್ ನೀಡಲಿದ್ದಾರೆ ಎಂದು ಮನೋರಮಾ ವರದಿ ಹೇಳುತ್ತದೆ.
ಈ ವಿವಾಹ ಮಹೋತ್ಸವದಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇವರ ವಾಸ್ತವ್ಯಕ್ಕಾಗಿ 1,500 ಸ್ಟಾರ್ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇವರನ್ನು ವಿವಾಹ ಸ್ಥಳಕ್ಕೆ ಕರೆತರಲು ಎರಡು ಸಾವಿರ ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿಐಪಿ ಗಣ್ಯರ ಬರುವಿಕೆಗಾಗಿ 15 ಹೆಲಿಕಾಪ್ಟರ್ ವ್ಯವಸ್ಥೆಯೂ ಇದೆ. ಅತಿಥಿಗಳ ಆದರಾತಿಥ್ಯಕ್ಕೆ ನಿಯೋಜಿಸಿರುವ ಸಹಾಯಕರು ಸೈನಿಕರ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಧುಮಗಳ ಅಲಂಕಾರಕ್ಕೆ 17 ಕೋಟಿ ರೂಪಾಯಿ ಮೌಲ್ಯದ ವಿಶೇಷ ಸೀರೆ ಖರೀದಿಸಲಾಗಿದ್ದು, ಮಧುಮಗಳು ಮದುವೆ ದಿನ ಇದನ್ನು ಉಡುತ್ತಾಳೆ. ಇದರ ಜತೆಗೆ ಈ ವಿಶೇಷ ದಿನಕ್ಕಾಗಿ ತಂದೆ ಉಡುಗೊರೆ ಮಾಡಿದ 90 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಧರಿಸಲಿದ್ದಾಳೆ.

ಅದ್ದೂರಿ ವೆಚ್ಚಕ್ಕೆ ಹಣ ಎಲ್ಲಿಂದ?
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರಲ್ಲಿ ಸಿಬಿಐ ಜನಾರ್ಧನ ರೆಡ್ಡಿಯವರನ್ನು ಬಂಧಿಸಿದ ಬಳಿಕ, 2015ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ರೆಡ್ಡಿಯವರ ಗಣಿ ಕಂಪನಿಗಳು ಇರುವ ಹುಟ್ಟೂರು ಬಳ್ಳಾರಿ ಅಥವಾ ಕಡಪ ಪ್ರದೇಶಕ್ಕೆ ಭೇಟಿ ನೀಡದಂತೆ ಷರತ್ತು ವಿಧಿಸಲಾಗಿತ್ತು. ಆದರೆ ಮಗಳ ವಿವಾಹ ಕಾರಣಕ್ಕಾಗಿ ನವೆಂಬರ್ 1ರಿಂದ 21ರವರೆಗೆ ಇದನ್ನು ಸುಪ್ರೀಂಕೋರ್ಟ್ ಸಡಿಲಿಸಿದೆ.
2014ರಲ್ಲಿ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರ ತಡೆಯ ವಿಶೇಷ ನ್ಯಾಯಾಲಯ, ರೆಡ್ಡಿ ಹಾಗೂ ಅವರ ಪತ್ನಿಗೆ ಸೇರಿದ 37.86 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಕಾನೂನು ಜಾರಿ ನಿರ್ದೇಶನಾಲಯ ಅವರ ಬ್ಯಾಂಕ್ ಖಾತೆಗಳನ್ನು ಅಮಾನತು ಮಾಡಿತ್ತು. ಜತೆಗೆ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು.
ರೆಡ್ಡಿಯವರು ಸುಮಾರು 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿ ರೂಪಾಯಿಗಳನ್ನು ಸಿಂಗಾಪುರ, ಮರೀಷಿಯಸ್ ಹಾಗೂ ಐಸ್ಲೆ ಆಫ್ ಮ್ಯಾನ್ ದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಹೇಳಿಕೆಗಳನ್ನು ಉಲ್ಲೇಖಿಸಿ, ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಆದರೆ ಸಿಬಿಐ ಅಂದಾಜಿನಂತೆ ಗಣಿ ಧಣಿಯ ಸಾಗರೋತ್ತರ ಹೂಡಿಕೆ ಸುಮಾರು 5 ಸಾವಿರ ಕೋಟಿ ರೂಪಾಯಿಗೆ ಸೀಮಿತ. ಆದರೆ ಅದನ್ನು ವಶಪಡಿಸಿಕೊಳ್ಳಲು ಸಿಬಿಐಗೆ ಸಾಧ್ಯವಾಗಿಲ್ಲ. ಏಕೆಂದರೆ ಇಂಥ ತೆರಿಗೆ ಸ್ವರ್ಗ ದೇಶಗಳು ಜನಾರ್ದನ ರೆಡ್ಡಿ ಸಂಪತ್ತಿನ ಮಾಹಿತಿಯನ್ನು ಭಾರತದ ಜತೆ ಹಂಚಿಕೊಳ್ಳಲು ನಿರಾಕರಿಸಿವೆ.
ದೇಶದಲ್ಲಿ ಲಕ್ಷಾಂತರ ಮಂದಿ ನಗದು ಹಣದ ಹಪಹಪಿಯಲ್ಲಿದ್ದರೆ, ಇಂಥ ಅದ್ದೂರಿ ವಿವಾಹ ನಡೆಸುವುದನ್ನು ವಿರೋಧಿಸುವವರೂ ಇದ್ದಾರೆ.
ಅದ್ದೂರಿ ಹಾಗೂ ದುಂದುವೆಚ್ಚದ ವಿವಾಹ ನಿರ್ಬಂಧಿಸುವ ಸಂಬಂಧ ಹಿಂದೆ ಖಾಸಗಿ ಮಸೂದೆಯನ್ನು ಮಂಡಿಸಿದ್ದ ರಾಜ್ಯದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಆತ್ಮಗೌರವ ಇರುವ ಯಾರೂ ಇದರಲ್ಲಿ ಭಾಗವಹಿಸಲಾರರು ಎಂದು ಹೇಳಿಕೆ ನೀಡಿದ್ದಾರೆ.
ಎಲ್‌ಸಿಡಿ ಸ್ಕ್ರೀನ್ ಅಳವಡಿಸಿದ್ದ ಅಭೂತಪೂರ್ವ ವಿವಾಹ ಆಮಂತ್ರಣವನ್ನು ಸಾರ್ವಜನಿಕವಾಗಿಯೇ ಟೀಕಿಸಿದ್ದ ಕುಮಾರ್, "ಇದು ಸಂಪತ್ತಿನ ಆಡಂಬರದ ಪ್ರದರ್ಶನ. ನಾನು ಈ ವಿವಾಹಕ್ಕೆ ಹೋಗುವುದಿಲ್ಲ. ಶ್ರೀಮಂತಿಕೆಯ ಸೊಕ್ಕು ಮೆರೆಯುವ ನನ್ನ ಯಾವುದೇ ಸಂಬಂಧಿಕರು ಅಥವಾ ಸ್ನೇಹಿತರ ವಿವಾಹಕ್ಕೂ ನಾನು ಹೋಗುವುದಿಲ್ಲ" ಎಂದು ಹೇಳಿದ್ದರು.
ಆದರೆ ಕೆಲ ಸಚಿವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ವಧೂವರರನ್ನು ಆಶೀರ್ವದಿಸುವ ನಿರೀಕ್ಷೆ ಇದೆ.

ಕೃಪೆ: thenewsminute.com

share
ಅನ್ನಾ ಇಸಾಕ್
ಅನ್ನಾ ಇಸಾಕ್
Next Story
X