ಅಂಬಾನಿ ಪರಿವಾರಕ್ಕೆ ಅಳಿಯ ಬರುತ್ತಿದ್ದಾರೆ, ಯಾರು ಗೊತ್ತೇ ?

ಅಹ್ಮದಾಬಾದ್, ನ.15: ಅಂಬಾನಿ ಪರಿವಾರದಲ್ಲಿ ಸದ್ಯದಲ್ಲಿಯೇ ವಿಶೇಷ ಕಾರ್ಯಕ್ರಮವೊಂದು ನಡೆಯಲಿದೆ.ಅದೇ ಇಶಿತಾ ಸಲಗಾಂವ್ಕರ್ ಹಾಗೂ ನಿಶಾಲ್ ಮೋದಿ ಅವರ ವಿವಾಹ. ಇಶಿತಾ ಖ್ಯಾತ ಉದ್ಯಮಿ ದತ್ತಾರಾಜ್ ಸಲಗಾಂವ್ಕರ್ ಹಾಗೂ ದೀಪ್ತಿ ಸಲಗಾಂವ್ಕರ್ ಅವರ ಪುತ್ರಿಯಾಗಿದ್ದಾರೆ. ದೀಪ್ತಿ ಬೇರೆ ಯಾರೂ ಅಲ್ಲ. ಭಾರತದ ಖ್ಯಾತಿವೆತ್ತ ಉದ್ಯಮಿ ದಿ.ಧೀರೂಭಾಯಿ ಅಂಬಾನಿಯ ಪುತ್ರಿ.ಅತ್ತ ವರ ನಿಶಾಲ್ ಅವರು ಇನ್ನೊಬ್ಬ ಉದ್ಯಮಿ ನೀರವ್ ಮೋದಿ ಅವರ ಕಿರಿಯ ಸಹೋದರನಾಗಿದ್ದಾರೆ. ಈ ವಿವಾಹ ಡಿಸೆಂಬರ್ 4ರಂದು ಗೋವಾದಲ್ಲಿ ನಡೆಯಲಿದೆ. ನೀರವ್ ಕುಟುಂಬ ಗೋವಾದಲ್ಲೇ ವಾಸಿಸುತ್ತಿದೆ. ವಿವಾಹವು ಬಹಳ ಅದ್ದೂರಿಯಾಗಿ ನಡೆಯಲಿದೆಯೆಂಬ ಬಗ್ಗೆ ಮಾಹಿತಿಯಿದೆ. ವಿವಾಹದ ಮೊದಲು, ಇಶಿತಾ ಅವರ ಮಾವ, ಉದ್ಯಮಿ ಮುಕೇಶ್ ಅಂಬಾನಿಮುಂಬೈಯ್ಯಲ್ಲಿರುವ ತಮ್ಮ ನಿವಾಸದಲ್ಲಿ ಒಂದು ಪಾರ್ಟಿ ನೀಡಲಿದ್ದಾರೆ. ಈ ಪಾರ್ಟಿ ಇದೇ ತಿಂಗಳಲ್ಲಿ ನಡೆಯಬಹುದೆನ್ನಲಾಗಿದೆ. ಇಂಗ್ಲಿಷ್ ದೈನಿಕ ಇಕನಾಮಿಕ್ ಟೈಮ್ಸ್ ಪ್ರಕಾರ ಈ ಪಾರ್ಟಿಯಲ್ಲಿ ಭಾಗವಹಿಸುವವರಿಗೆ ವಸ್ತ್ರಸಂಹಿತೆ ಕೂಡ ಸಿದ್ಧವಾಗಿದೆ. ಅತಿಥಿಗಳಿಗೆ ಕಪ್ಪು ಬಣ್ಣದ ದಿರಿಸು ಧರಿಸಲು ಹೇಳಲಾಗಿದ್ದು, ಪಾರ್ಟಿಯ ಥೀಮ್ ‘ರೋಮಾನ್ಸ್’ ಆಗಲಿದೆ. ವಿವಾಹ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಕಾರ್ಯಕ್ರಮ ನೀಡಲಿದ್ದಾರೆಂದು ತಿಳಿದು ಬಂದಿದೆ. ಶಾರುಖ್ ಹೊರತಾಗಿ ಇತರ ಸೆಲೆಬ್ರಿಟಿಗಳೂ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆದರೆ ವಿವಾಹ ತಯಾರಿಯ ಬಗ್ಗೆ ಯಾವ ಸುದ್ದಿಯೂ ಮಾಧ್ಯಮಗಳಿಗೆ ಲಭ್ಯವಿಲ್ಲ.
ಇದೊಂದು ಅರೇಂಜ್ಡ್ ವಿವಾಹವಾಗಿದ್ದರೂ ನಿಶಾಲ್ ಅವರು ಇಶಿತಾ ಅವರಿಗೆ ಫಿಲ್ಮಿ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದಾರೆಂಬ ಸುದ್ದಿಯಿದೆ,. ಇಶಿತಾ ಅವರಿಗೆ ಪತ್ರಿಕೋದ್ಯಮ ಹಾಗೂ ಕಲೆಯಲ್ಲಿ ಆಸಕ್ತಿಯಿದ್ದರೆ, ನಿಶಾಲ್ ತಮ್ಮ ಸಹೋದರನಂತೆಯೇ ಜುವೆಲ್ಲರಿ ಉದ್ಯಮಿಯಾಗಿದ್ದಾರೆ.





