ಕೇರಳ: 2 ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ರದ್ದು

ತಿರುವನಂತಪುರಂ,ನವೆಂಬರ್ 15: ಕೇರಳದ ಎರಡು ಮೆಡಿಕಲ್ ಕಾಲೇಜುಗಳ ಎಂಬಿಬಿಎಸ್ ಪ್ರವೇಶವನ್ನು ಜಸ್ಟಿಸ್ ಜೇಮ್ಸ್ ಸಮಿತಿ ರದ್ದುಪಡಿಸಿದೆ ಎಂದು ವರದಿಯಾಗಿದೆ. ಕಣ್ಣೂರ್ ಮೆಡಿಕಲ್ ಕಾಲೇಜುಮತ್ತು ಕರುಣಾ ಮೆಡಿಕಲ್ ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಲ್ಲ ಎಂದು ಸಮಿತಿ ರದ್ದುಪಡಿಸುವ ಕ್ರಮಕೈಗೊಂಡಿದೆ. ಇದರಿಂದಾಗಿ ಇಲ್ಲಿ ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ವರದಿ ತಿಳಿಸಿದೆ.
Next Story





