" ಭೋಪಾಲ್ 'ಎನ್‌ಕೌಂಟರ್' ಗೆ ಬಲಿಯಾದವರು ಮುಸ್ಲಿಮರಲ್ಲದಿದ್ದರೆ ಬದುಕುಳಿಯುತ್ತಿದ್ದರು"
ಮಾಜಿ ಐಪಿಎಸ್ ಅಧಿಕಾರಿ ವಿಭೂತಿ ನಾರಾಯಣ್ ರಾಯ್

ಸೇಡಿಗೆ ಸೇಡು ತೆಗೆದುಕೊಳ್ಳುವುದರಲ್ಲಿ ಪ್ರಸಿದ್ಧಿ ಪಡೆದಿರುವ ಲೇಖಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ವಿಭೂತಿ ನಾರಾಯಣ್ ರಾಯ್ ಅವರು ಇತ್ತೀಚೆಗೆ ಭೋಪಾಲ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಎಂಟು ಸಿಮಿ ಕಾರ್ಯಕರ್ತರಿಗೆ ನ್ಯಾಯದ ಭರವಸೆ ಇಲ್ಲ ಎಂದು ಹೇಳಿದ್ದಾರೆ.
2016 ಚಂಡೀಗಢ ಸಾಹಿತ್ಯ ಉತ್ಸವದಲ್ಲಿ ‘ಹಶಿಂಪುರ ಮೇ 22’ ಎನ್ನುವ ತಮ್ಮ ಪುಸ್ತಕದ ಬಗ್ಗೆ ಚರ್ಚಿಸುತ್ತ ಅವರು ಹಶೀಂಪುರದಲ್ಲಿ ನಡೆದ ಘಟನೆ ಮತ್ತು ಭೋಪಾಲ್ ಪ್ರಕರಣದ ನಡುವೆ ಸಂಬಂಧವಿರುವುದನ್ನು ಹೇಳಿದ್ದಾರೆ. ಕೋಮುವಾದಿ, ಜಾತೀವಾದ ಮತ್ತು ಪೊಲೀಸರ ಲಿಂಗ ತಾರತಮ್ಯದ ಕಡೆಗೆ ಬೊಟ್ಟು ಮಾಡುತ್ತಾ ಅವರು ಎಂಟು ಸಿಮಿ ಕಾರ್ಯಕರ್ತರು ಮುಸ್ಲಿಮೇತರರಾಗಿದ್ದಲ್ಲಿ ಬದುಕುವ ಅವಕಾಶ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.
ರಾಯ್ ಅವರು ಭದ್ರತಾ ಪಡೆಗಳು, ಮುಖ್ಯವಾಗಿ ಸೇನೆಯ ಬಗ್ಗೆಯೂ ಗಂಭೀರ ದೃಷ್ಟಿಕೋನ ಹೊಂದಿದ್ದಾರೆ.ರಾಷ್ಟ್ರಭಕ್ತಿಯ ಹೆಸರಲ್ಲಿ ಕೊಲೆಗಳನ್ನು ಮಾಡಿ ಅದರಿಂದ ನುಣುಚಿಕೊಳ್ಳುವುದು ಮತ್ತು ಅವರನ್ನು ಪ್ರಶ್ನಿಸುವುದು ಸಶಸ್ತ್ರಪಡೆಗಳಿಗೆ ಮಾಡಿದ ಅವಹೇಳನ ಎಂದು ದೂರುವ ಬಗ್ಗೆಯೂ ಅವರು ಗಂಭೀರ ನಿಲುವು ಹೊಂದಿದ್ದಾರೆ. “ತಪ್ಪು ಮಾಡಿದರೆ ಮಾತ್ರ ಅವರು ಭಯ ಪಡಬೇಕು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸೇನೆಯ ಪಾತ್ರವನ್ನು ನಾವು ಚರ್ಚಿಸಲು ಬಯಸಿದ್ದೇವೆ. ಸಶಸ್ತ್ರ ಸೇನೆ ರಾಷ್ಟ್ರಭಕ್ತಿಯ ಹೆಸರಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ರಾಯ್ ಹೇಳಿದ್ದಾರೆ.
ಭೋಪಾಲ್ ಬಲಿಪಶುಗಳಿಗೆ ನ್ಯಾಯವಿಲ್ಲ
“ಭೋಪಾಲ್ ಹತ್ಯೆಗೆ ಕಾರಣವಾದವರಿಗೆ ಏನೂ ಆಗುವುದಿಲ್ಲ. ಏಕೆಂದರೆ ಸಮಾಜ ಈ ಬಗ್ಗೆ ಪ್ರಶ್ನೆಯನ್ನೇ ಎತ್ತದಷ್ಟು ಸಮಾಧಾನ ಸ್ಥಿತಿಯಲ್ಲಿದೆ. ಭೋಪಾಲ್ ಹತ್ಯೆಯ ನಂತರದ ವಿಷಯಗಳನ್ನು ಗಮನಿಸಿದಲ್ಲಿ ಬಹಳಷ್ಟು ಕಡೆ ಸಿಸಿಟಿವಿಗಳು ಕೆಲಸ ಮಾಡುತ್ತಿರಲಿಲ್ಲ. ವಾಚ್ ಟವರ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗಳಿರಲಿಲ್ಲ. ಏಕೆಂದರೆ ಶೇ. 80ರಷ್ಟು ಮಂದಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮನೆಯಲ್ಲಿ ಕರ್ತವ್ಯನಿರತರಾಗಿದ್ದರು. ಹಶೀಂಪುರ ಪ್ರಕರಣದಲ್ಲಿ ಸೇನೆಯ ಪಾತ್ರ ಶೋಚನೀಯವಾಗಿತ್ತು ಮತ್ತು ಪ್ರೊವೆನ್ಸಿಯಲ್ ಆರ್ಮ್ಡ್ ಕಾನ್ಸ್ಟೇಬ್ಯುಲರಿ (ಪಿಎಸಿ) ಬಾಡಿಗೆ ಕೊಲೆಗಾರರಷ್ಟೇ ಆಗಿದ್ದರು” ಎಂದು ಈ ಪ್ರಕರಣದಲ್ಲಿ ಸೇನಾಧಿಕಾರಿಗಳು ನ್ಯಾಯ ಕೊಡಲು ವಿಫಲವಾಗಿರುವ ಬಗ್ಗೆಯೂ ಅವರು ಮಾತನಾಡಿದರು.
ಪೊಲೀಸರ ಜಾತೀಯತೆ, ಕೋಮುವಾದ ಮತ್ತು ಲಿಂಗತಾರತಮ್ಯದ ಬಗ್ಗೆ ಪ್ರಶ್ನೆಯೊಂದಕ್ಕೇ ಉತ್ತರಿಸಿದ ಅವರು, “ಸಾಮಾನ್ಯ ಜನರೇ ಪೊಲೀಸರಾಗಿ ಕಾರ್ಯ ನಿರ್ವಹಿಸುತ್ತಾರೆ. ಸಮಾಜದ ತಾರತಮ್ಯಗಳ ಆಧಾರದಲ್ಲೇ ಪೊಲೀಸ್ ನೇಮಕಾತಿಯೂ ನಡೆಯುತ್ತದೆ. ಪೊಲೀಸ್ ಅಧಿಕಾರಿಗಳು ಅಲ್ಪಸಂಖ್ಯಾತರು ಮತ್ತು ದಲಿತರಾಗಿರುವ ತಮ್ಮ ಸಹೋದ್ಯೋಗಿಗಳ ಜೊತೆಗೆ ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಪೊಲೀಸ್ ವ್ಯವಸ್ಥೆಯ ಮೂಲಭೂತ ರಚನೆಯು ಬ್ರಿಟಿಷ್ ಕಾಲದಲ್ಲಿದ್ದ ಹಾಗೆಯೇ ಇರಲು ಕಾರಣವೇನು? ಇದೆಂದೂ ಚುನಾವಣೆಯ ವಿಷಯವಾಗಿಲ್ಲ. ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವ ನಾಗರಿಕ ಪೊಲೀಸರ ಅಗತ್ಯ ನಮಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಶೀಂಪುರದ ಪ್ರಕರಣ
1987ರಲ್ಲಿ ಉತ್ತರಪ್ರದೇಶದ ಹಶೀಂಪುರ ಪ್ರಕರಣದಲ್ಲಿ 12 ಯುವ ಮತ್ತು ಆರೋಗ್ಯವಂತ ಮುಸ್ಲಿಮರನ್ನು ಪಿಎಸಿ ಸಿಬ್ಬಂದಿಗಳು ಹತ್ಯೆಗೈದಿದ್ದರು. “ಮುಸ್ಲಿಂ ಸಮುದಾಯಕ್ಕೆ ಪಾಠ ಕಲಿಸಲು ಹಶೀಂಪುರ ಪ್ರಕರಣ ನಡೆದಿದೆ. ಭೋಪಾಲ್ ಬಲಿಪಶುಗಳು ಮುಸ್ಲಿಮರೇತರಾಗಿದ್ದಲ್ಲಿ ಅವರ ಉಳಿವಿನ ಅವಕಾಶ ಹೆಚ್ಚಾಗಿತ್ತು. ಅವರನ್ನು ಬಂಧಿಸಬಹುದಾಗಿತ್ತು. ಮುಂಬೈ ಭಯೋತ್ಪಾದನಾ ದಾಳಿಯ ನಂತರ 2008ರಲ್ಲಿ ಅಜ್ಮಲ್ ಕಸಬ್‌ನನ್ನು ಬಂಧಿಸಿದಾಗ ಸಾಕಷ್ಟು ಮಾಹಿತಿ ಸಿಕ್ಕಿತ್ತು” ಎಂದು ರಾಯ್ ಹೇಳಿದ್ದಾರೆ. ರಾಜ್ಯ ಮತ್ತು ವ್ಯವಸ್ಥೆ ಹೇಗೆ ಹಶೀಂಪುರದ ಬಲಿಪಶುಗಳಿಗೆ ಅನ್ಯಾಯ ಮಾಡಿದೆ ಎಂದು ಅವರು ವಿವರವಾಗಿ ಮಾತನಾಡಿದ್ದಾರೆ. “ಪ್ರತೀ ಹಂತದಲ್ಲೂ ವೈಫಲ್ಯ ಕಂಡಿದ್ದೇವೆ. ಭಾರತದ ಸಂಪೂರ್ಣ ವ್ಯವಸ್ಥೆ ವಿಫಲವಾಗಿದೆ. ಮಧ್ಯಮಗಳು, ರಾಜಕೀಯ ನಾಯಕತ್ವ, ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ಎಲ್ಲರೂ ಜೊತೆಯಾಗಿ ಆರೋಪಿಗಳು ದೋಷಮುಕ್ತರಾಗಲು ಕಾರಣರಾದರು” ಎಂದು ಅವರು ಅಭಿಪ್ರಾಯಪಟ್ಟರು.
ವ್ಯವಸ್ಥೆಯಲ್ಲಿ ಧೋಷ
“ಹಶೀಂಪುರ ಬಲಿಪಶುಗಳಿಗೆ ನ್ಯಾಯ ದೊರಕಿಸಲು ಆಗಿನ ಪ್ರಧಾನಿ ರಾಜೀವ್ ಗಾಂಧಿ ಬಹಳ ಆಸಕ್ತಿ ಹೊಂದಿದ್ದರೂ ನ್ಯಾಯ ಸಿಗಲಿಲ್ಲ. ಅವರು ರಾಜಕೀಯ ನಾಯಕರೂ ಆಗಿದ್ದರು. ಉತ್ತರ ಪ್ರದೇಶದಲ್ಲಿ ಅವರು ಚುನಾವಣೆ ಗೆಲ್ಲಬೇಕಿತ್ತು. ಆಗಿನ ಮುಖ್ಯಮಂತ್ರಿ ವೀರ ಬಹದ್ದೂರ್ ಸಿಂಗ್ ಅವರಿಗೆ ಚುನಾವಣೆ ಗೆಲ್ಲುವುದೊಂದೇ ಬೇಕಿತ್ತು” ಎಂದೂ ರಾಯ್ ಹೇಳಿದ್ದಾರೆ. ರಾಯ್ ಪ್ರಕಾರ ಭಾರತದಲ್ಲಿ ಮುಸ್ಲಿಮರು ಜಾತ್ಯಾತೀತರಾಗುವಂತೆ ಒತ್ತಡವಿದೆ. ಜಾತ್ಯಾತೀತ ರಾಷ್ಟ್ರ ವಿಫಲವಾದಲ್ಲಿ ಇಲ್ಲಿ ಹಿಂದುತ್ವ ಪಡೆಗಳು ಪ್ರಭಾವ ಹೊಂದುತ್ತವೆ. “ಇದು ವಿಚಿತ್ರ ಸತ್ಯ. ಕಳೆದ ಸಂಸತ್ ಚುನಾವಣೆಯಲ್ಲೂ ಇದನ್ನು ಕಂಡಿದ್ದೇವೆ. ಅತ್ತವೂ ಇಲ್ಲ, ಇತ್ತವೂ ಇಲ್ಲ ಎಂದಿದ್ದ ಹಿಂದೂಗಳು ಬಿಜೆಪಿ ಕಡೆಗೆ ವಾಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ರಾಜ್ಯ ಮತ್ತು ಪೊಲೀಸ್ ಹಾಗೂ ಸೇನೆಯ ಕೈಗಳ ಬಗ್ಗೆ ಮಾತನಾಡಿದ ರಾಯ್ ಪ್ರಕಾರ, ಇಂತಹ ಸಂಸ್ಥೆಗಳನ್ನು ಕೇವಲ ಆಡಳಿತ ವರ್ಗ ಮತ್ತು ಪೊಲೀಸರ ರಕ್ಷಣೆಗಾಗಿ ಸೃಷ್ಟಿಸಲಾಗಿದೆ. “ಉದ್ಯೋಗ ಅವಕಾಶ ಹೆಚ್ಚಾಗಿರುವ ಎರಡು ವ್ಯವಸ್ಥೆಗಳೇ ಪೊಲೀಸ್ ಮತ್ತು ಸೇನೆ. ಆದರೆ ಇವರು ಸ್ವತಃ ಕೆಲಸ ಮಾಡುವುದಿಲ್ಲ ಮತ್ತು ಸ್ವತಂತ್ರ ಪಾತ್ರವೂ ಇವರಿಗಿಲ್ಲ. ರಾಷ್ಟ್ರದ ಆದೇಶವನ್ನು ಇವು ಪಾಲಿಸುತ್ತವೆ. ಹಿಂಸೆ ಕೇವಲ ವಿಷಯಗಳನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿದೆ. ಅಷ್ಟೇ ಅಲ್ಲ, ರಾಷ್ಟ್ರದ ವ್ಯವಸ್ಥೆಯ ನಡವಳಿಕೆಯೂ ಬಹಳಷ್ಟನ್ನು ಹೇಳುತ್ತದೆ” ಎಂದು ರಾಯ್ ಅಭಿಪ್ರಾಯಪಟ್ಟರು. 1990ರವರೆಗಿನ ರಾಷ್ಟ್ರದ ಪ್ರಮುಖ 12 ಕೋಮು ಗಲಭೆಗಳನ್ನು ಅಧ್ಯಯನ ಮಾಡಿದರೆ ಒಬ್ಬ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಶಿಕ್ಷೆಯಾಗಿದೆ. ಅದೂ ಭಗಲ್ಪುರ ಪ್ರಕರಣದಲ್ಲಿ. ಅದೇ ಸಮಯದಲ್ಲಿ ಪೊಲೀಸರನ್ನು ಶಿಕ್ಷಿಸುವುದರಿಂದಲೂ ಸಮಸ್ಯೆ ಪರಿಹಾರವಾಗದು. ಏಕೆಂದರೆ ರಾಜಕೀಯ ನಾಯಕತ್ವ, ನ್ಯಾಯಾಂಗ ಮತ್ತು ಪೊಲೀಸರ ಸಾಂಘಿಕ ವೈಫಲ್ಯಕ್ಕೆ ಒಬ್ಬರನ್ನು ಶಿಕ್ಷಿಸಿ ಫಲವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
“ನರನನ್ನು ಶಿಕ್ಷಿಸಲು ಒಂದು ವ್ಯವಸ್ಥೆ ಅಗತ್ಯ” ಎನ್ನುತ್ತಾರೆ ರಾಯ್ . ತಮ್ಮ ಪುಸ್ತಕದಲ್ಲಿ ವಿರುದ್ಧ ಅಭಿಪ್ರಾಯಗಳನ್ನು ನೀಡಿಯೂ ಅವರು ಧೈರ್ಯವಾಗಿ ವ್ಯವಸ್ಥೆಯನ್ನು ಎದುರಿಸಿರುವುದು ಹೇಗೆ ಎನ್ನುವ ಪ್ರಶ್ನೆಗೆ ಅವರು, “ನಮ್ಮ ನಾಯಕರು ಓದುವುದಿಲ್ಲ ಮತ್ತು ಲೇಖಕನನ್ನು ಭೇಟಿಯಾದಾಗ ಆತ ಕವಿ ಎಂದುಕೊಳ್ಳುತ್ತಾರೆ” ಎಂದರು.
ಕೃಪೆ:catchnews.com







