ಹೊಸನೋಟು ಬಂದಿಲ್ಲ:ಕೇರಳವನ್ನು ಪುನಃ ಕಡೆಗಣಿಸಿದ ಆರ್‌ಬಿಐ

ಕೋಟ್ಟಯಂ, ನ. 15: ಹೊಸ ನೋಟುಗಳ ವಿತರಣೆಯಲ್ಲಿಯೂ ಕೇರಳವನ್ನು ರಿಸರ್ವ್ ಬ್ಯಾಂಕ್ ಕಡೆಗಣಿಸಿದೆ. 500,1000 ರೂಪಾಯಿಯ ಹೊಸ ನೋಟುಗಳು ಸೋಮವಾರದಿಂದ ದೇಶದಲ್ಲಿ ಯಥೇಚ್ಛ ಲಭ್ಯಗೊಳಿಸಲಾಗುವುದು ಎಂದು ಘೋಷಣೆಯಾಗಿದ್ದರೂ ಕೇರಳದ ಯಾವ ಬ್ಯಾಂಕಿಗೂ ಅದು ತಲುಪಿಲ್ಲ. ಆದರೆ ಇತರ ರಾಜ್ಯಗಳಲ್ಲಿ ಹೊಸ 500ರೂಪಾಯಿ ನೋಟುಗಳನ್ನು ಅಗತ್ಯಾನುಸಾರ ಲಭ್ಯಗೊಳಿಸಲಾಗಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ದಿಲ್ಲಿಯಲ್ಲಿ ಉತ್ತರಪ್ರದೇಶ ಸಹಿತ ಹೆಚ್ಚಿನ ಕಡೆಯಲ್ಲಿ 100ರೂಪಾಯಿ ನೋಟುಗಳು ಅಗತ್ಯಕ್ಕೆ ತಕ್ಕಷ್ಟು ತಲುಪಿದೆ. ಕೇರಳದ ವ್ಯವಹಾರಸ್ತರಿಗೆ ರದ್ದು ಪಡಿಸಲಾದ 500,1000 ನೋಟುಗಳ ಬದಲಿಗೆ ಸೋಮವಾರ ರಿಸರ್ವ್ ಬ್ಯಾಂಕ್ ಮೊದಲು ನಿಷೇಧಿಸಿದ ತೀರಾ ಸವೆದ ನೋಟುಗಳು ಲಭಿಸಿವೆ. ಇವುಗಳಲ್ಲಿ ಕೆಲವು ತುಂಬ ಹಾನಿಯಾದ ನೋಟುಗಳಾಗಿದ್ದವು. 2001ರಲ್ಲಿ ಆರ್‌ಬಿಐ ನಿಷೇಧಿಸಿದ ನೋಟುಗಳು ಕೂಡಾ ಇದರಲ್ಲಿದ್ದವು. ಹಲವು ಕಡೆಗಳಲ್ಲಿ ಈ ನೋಟುಗಳನ್ನು ಸ್ವೀಕರಿಸಲು ವ್ಯಾಪಾರಿಗಳು ಸಿದ್ಧರಾಗಿಲ್ಲ ಎಂದು ವರದಿ ತಿಳಿಸಿದೆ.
Next Story





