ಐದನೆ ತರಗತಿ ವಿದ್ಯಾರ್ಥಿಯ ಕೈಮುರಿದ ಘಟನೆ: ಅಧ್ಯಾಪಕನ ಅಮಾನತು

ಕೋಟ್ಟಯಂ,ನ. 15: ಐದನೆ ತರಗತಿ ವಿದ್ಯಾರ್ಥಿಯೊಬ್ಬನ ಕೈಮುರಿದ ಆರೋಪದಲ್ಲಿ ವಾಳತ್ತುಂಗಲ್ ಸರಕಾರಿ ಬಾಯ್ಸ್ ಹೈಯರ್ ಸೆಕಂಡರಿ ಸ್ಕೂಲ್ ಅಧ್ಯಾಪಕರೊಬ್ಬರನ್ನು ಅಮಾನತು ಗೊಳಿಸಲಾಗಿದೆ ಎಂದು ವರದಿಯಾಗಿದೆ. ಐದನೆ ತರಗತಿ ವಿದ್ಯಾರ್ಥಿ ವಾಳತ್ತುಂಗಲ್ ತಂಬುರಾನ್ ವೆಳಿಯಿಲ್ ಮನೆಯ ಸಿರಾಜುದ್ದೀನ್ ರ ಪುತ್ರ ಮುಹಮ್ಮದ್ ಸೈದಲಿ(10)ಎಂಬ ವಿದ್ಯಾರ್ಥಿಯನ್ನು ಥಳಿಸಿ ಕೈಮುರಿತಕ್ಕೆ ಕಾರಣನಾದ ಅಧ್ಯಾಪಕ ಡಿ.ಶಿಜಿಯನ್ನು ಶುಕ್ಷಣ ಉಪನಿರ್ದೇಶಕರು ತನಿಖೆಯ ನಿಮಿತ್ತ ಅಮಾನತು ಮಾಡಿದ್ದಾರೆ.
ಗುರುವಾರ ಸಂಜೆ ಮೂರುವರೆಗಂಟೆಯ ವೇಳೆಗೆ ವಿದ್ಯಾರ್ಥಿಯ ಕೈಮುರಿದ ಘಟನೆ ನಡೆದಿತ್ತು ಎನ್ನಲಾಗಿದೆ. ಸೋಶಿಯಲ್ ಸಯನ್ಸ್ ಕ್ಲಾಸ್‌ನ ವೇಳೆ ಪೆನ್ನು ಕೆಳಗೆ ಬಿದ್ದದ್ದನ್ನು ಹೆಕ್ಕಲು ಬಗ್ಗಿದ್ದಕ್ಕೆ ವಿದ್ಯಾರ್ಥಿಯ ಕೈಯನ್ನು ಬೆಂಚಿಗೆ ಒತ್ತಿ ಮುರಿಯುವಂತೆ ಅಧ್ಯಾಪಕ ಶಿಕ್ಷೆ ನೀಡಿದ್ದಾನೆ. ವಿಷಯ ತಿಳಿದ ಹೆತ್ತವರು ಕೂಡಲೇ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಬಾಲಕ ಕೈಗೆ ಪ್ಲಾಸ್ಟರ್ ಹಾಕಲಾಗಿದೆ. ನಂತರ ಆತನ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಕೊಲ್ಲಂ ಶಕ್ಷಣ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಬಾಲಕಕೈಹಿಡಿದು ತಿರುಚಿ ಮುರಿದ ಅಧ್ಯಾಪಕನಿಗೆ ಎಚ್ಚರಿಕೆ ನೀಡಿದ್ದೇನೆ. ಮತ್ತು ಬಾಲಕನ ಶಿಕ್ಷಣಕ್ಕೆ ನೆರವು ಲಭಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯೋಪಾಧ್ಯಾಯಿನಿ ತನ್ನ ವರದಿಯಲ್ಲಿ ಶಿಕ್ಷಣ ಅಧಿಕಾರಿಗೆ ವಿವರಿಸಿದ್ದಾರೆಂದು ವರದಿ ತಿಳಿಸಿದೆ.





