ನ.17ರಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸದಸ್ಯತ್ವ ಅಭಿಯಾನ ಕಾರ್ಯಾಗಾರ

ಉಳ್ಳಾಲ, ನ.15: ಎಸ್ಸೆಸ್ಸೆಫ್ ರಾಜ್ಯವ್ಯಾಪಿಯಾಗಿ ನ.18ರಿಂದ 30ರ ತನಕ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದ ಅಂಗವಾಗಿ ಉಳ್ಳಾಲ ಡಿವಿಷನ್ ವತಿಯಿಂದ ನ.17ರಂದು ಕಾರ್ಯಾಗಾರ ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ತಿಬ್ಲೆಪದವುವಿನಅಲ್-ಮದೀನಾ ಹಾಲ್‌ನಲ್ಲಿ ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ ಇನೋಳಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಹಾಫಿಳ್ ಯಅ್ಕೂಬ್ ಸಅದಿ ನಾವೂರು ಕಾರ್ಯಕ್ರಮ ಉದ್ಘಾಟಿಸುವರು. ಎಸ್ಸೆಸ್ಸೆಫ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಇಲೆಕ್ಷನ್ ಮಾಹಿತಿ ಹಾಗೂ ರಫೀಕ್ ಸಅದಿ ದೇಲಂಪಾಡಿ ಸಂಘಟನಾ ತರಗತಿಯನ್ನು ನಡೆಸಲಿದ್ದಾರೆ. ಕಾರ್ಯಗಾರದಲ್ಲಿ ಡಿವಿಷನ್ ವ್ಯಾಪ್ತಿಯಲ್ಲಿರುವ 100 ಶಾಖೆಗಳ ಪದಾಧಿಕಾರಿಗಳು ಹಾಗೂ ಇಲೆಕ್ಷನ್ ಆಫೀಸರ್‌ಗಳು ಭಾಗವಹಿಸಲ್ಲಿದ್ದಾರೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





