ಈ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬೇಡಿ.

ಆಯುರ್ವೇದದಲ್ಲಿ ಕೆಲವು ಆಹಾರದ ಸೇವನೆಯಿಂದ ದೇಹದಲ್ಲಿ ವಿಷ ಸೇರುವ ಬಗ್ಗೆ ವಿವರವಿದೆ. ಆಧುನಿಕ ವಿಜ್ಞಾನವೂ ಆಹಾರವನ್ನು ಸಂಯುಕ್ತಗಳಾಗಿಸಿ ಜೀರ್ಣ ವ್ಯವಸ್ಥೆಯಲ್ಲಿ ಸೇರಿಸುವಾಗ ಕೆಲವು ಆಹಾರದ ಜೊತೆಗೆ ಹೊಂದಿಕೊಳ್ಳದೆ ಇರಬಹುದು ಎಂದು ಹೇಳುತ್ತದೆ. ಇಲ್ಲಿ ಅಂತಹ ಕೆಲವು ಆಹಾರಗಳ ಮಾಹಿತಿ ನೀಡಿದ್ದೇವೆ.
ಮಾಂಸ ಮತ್ತು ಹಾಲು
ಹಲವಾರು ಪುರಾತನ ಪುಸ್ತಕಗಳಲ್ಲಿ ತಾಯಿಯ ಹಾಲಿನಲ್ಲಿ ಆಹಾರ ತಯಾರಿಸುವುದು ಪಾಪ ಎಂದು ಬರೆಯಲಾಗಿದೆ. ಹಾಲು ಮಾಂಸದ ಜೊತೆಗೆ ಸರಿಹೊಂದುವುದಿಲ್ಲ ಎನ್ನುವ ಕಾರಣದಿಂದ ಈ ಭಾವನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ.
ಯೋಗರ್ಟ್ ಮತ್ತು ಹಣ್ಣುಗಳು
ಆಯುರ್ವೇದದ ಪ್ರಕಾರ ಹುಳಿ ಇರುವ ಆಹಾರಗಳು ಯೋಗಾರ್ಟ್ ಜೊತೆಗೂಡಿ ಆಸಿಡ್ ಉತ್ಪಾದಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಉರಿ ನಂದಿ ಹೋಗುತ್ತದೆ ಮತ್ತು ಚಯಾಪಚಯ ನಿಧಾನವಾಗುತ್ತದೆ.
ಪೆಪ್ಪರ್‌ಮಿಂಟ್ ಮತ್ತು ಗಾಳಿ ಇರುವ ಪಾನೀಯ
ಸಾಮಾನ್ಯವಾಗಿ ಮಿಂಟ್ ಮತ್ತು ಸೋಡಾ ಜೊತೆಯಾಗಿ ಉತ್ತಮ ಕ್ರಿಯೆ ತೋರಿಸುವುದಿಲ್ಲ ಎಂದು ತಿಳಿಯಲಾಗಿದೆ. ಇವುಗಳು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಗೊಂಡರೆ ಇವು ಸೈನೈಡ್ ರೂಪ ತಳೆದು ಹೊಟ್ಟೆಗೆ ಹಾನಿ ತರಬಹುದು. ಇದು ಪ್ರತೀ ಬಾರಿ ನಿಜವಾಗದೆ ಇದ್ದರೂ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ.
ಡೈರಿ ಉತ್ಪನ್ನ ಮತ್ತು ಆಂಟಿಬಯಾಟಿಕ್
ಕೆಲವು ಆಂಟಿ ಬಯಾಟಿಕ್ ಕ್ಯಾಲ್ಸಿಯಂ ಮತ್ತು ಲವಣಗಳನ್ನು ಹಾಲಿನಿಂದ ಹೀರಿಕೊಳ್ಳುತ್ತವೆ. ಹೀಗಾಗಿ ತಪ್ಪಿಸಬೇಕು.
ಲಿಂಬೆ ಮತ್ತು ಹಾಲು
ಹಾಲಿಗೆ ಲಿಂಬೆಯ ರಸ ಸ್ವಲ್ಪವೇ ಬೆರೆಸಿದರೂ ಅದು ಹಾಳಾಗುತ್ತದೆ. ಹೊಟ್ಟೆಯೊಳಗೂ ಲಿಂಬೆ ರಸ ಮತ್ತು ಹಾಲು ಇದೇ ಪರಿಣಾಮ ಬೀರುತ್ತದೆ. ಆಸಿಡ್ ಆಗಿ ಬದಲಾದ ಹಾಲು ವಿಷಕಾರಿ ಎಂದು ಆಯುರ್ವೇದ ಹೇಳುತ್ತದೆ.
ಜೇನು ಮತ್ತು ಬಿಸಿ ನೀರು
ಜೇನನ್ನು ಬಿಸಿನೀರಿನ ಜೊತೆಗೆ ಸೇರಿಸಿದಾಗ ಅಮಾ ಎನ್ನುವ ವಿಷವಸ್ತು ಉತ್ಪತ್ತಿಯಾಗುತ್ತದೆ ಎಂದು ಡಾ ಕುಲ್ರೀತ್ ಚೌಧುರಿ ತಮ್ಮ ಆಯುರ್ವೇದಿಕ್ ಜೀವನಕ್ಕೆ ಸಂಬಂಧಿಸಿದ ಪುಸ್ತಕದಲ್ಲಿ ಹೇಳಿದ್ದಾರೆ. ಬಿಸಿನೀರಲ್ಲಿ ಮಿಶ್ರ ಮಾಡಿದಾಗ ಜೇನು ತನ್ನ ಗುಣ ಕಳೆದುಕೊಂಡು ವಿಷವಾಗುತ್ತದೆ.







