ಜ.6ರಿಂದ ಟೀಮ್ ಬಿನ್ ಫಹಾದ್-ವಿಂಟರ್ ಟ್ರೋಫಿ 2017 ಕ್ರಿಕೆಟ್ ಪಂದ್ಯ

ಯಾಂಬು, ನ.15: ಸೌದಿ ಅರೆಬಿಯಾದ ಯಾಂಬುವಿನಲ್ಲಿ ಪ್ರಪ್ರಥಮ ಬಾರಿಗೆ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ 10 ಓವರ್ ಲೀಗ್ ಮತ್ತು ನಾಕೌಟ್ ಕ್ರಿಕೆಟ್ ಪಂದ್ಯಾಕೂಟವು 2017ರ ಜನವರಿ 6ರಿಂದ ಪ್ರತೀ ಶುಕ್ರವಾರ ಯಾಂಬೂ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. 10 ಓವರ್‌ಗಳ ಪಂದ್ಯ ನಡೆಯಲಿದೆ.
ಪ್ರಥಮ ಬಹುಮಾನವಾಗಿ 10,001-ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಚಾಂಪಿಯನ್ ಟ್ರೋಫಿ, ದ್ವಿತೀಯ ಬಹುಮಾನವಾಗಿ 6006 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ರನ್ನರ್ ಅಪ್ ಟ್ರೋಫಿ, ತೃತೀಯ ಬಹುಮಾನವಾಗಿ 3,003 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ, ಚತುರ್ಥ ಬಹುಮಾನವಾಗಿ 1001 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ ವಿತರಿಸಲಾಗುವುದು.
ಮ್ಯಾನ್ ಆಫ್ ದಿ ಸೀರೀಸ್ ವಿಜೇತರಿಗೆ 1000 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ, ಬೆಸ್ಟ್ ಬ್ಯಾಟ್ಸಮನ್ಗೆ 500 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ, ಬೆಸ್ಟ್ ಬೌಲರ್‌ಗೆ 500 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ, ಮ್ಯಾನ್ ಆಫ್ ದಿ ಮ್ಯಾಚ್ ಫೈನಲ್‌ಗೆ 250 ಸೌದಿ ರಿಯಲ್ಸ್ ಹಾಗೂ ಬಿನ್ ಫಹಾದ್ ಟ್ರೋಫಿ ವಿತರಿಸಲಾಗುವುದು.
ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಅಬ್ದುಲ್ ಮುತ್ತಲೀಬ್ ದೂ.ಸಂ.: 0508988444, ಅನ್ಸಾರ್ ದೂ.ಸಂ.: 0559843800:, ಸಿರಾಜ್ ದೂ.ಸಂ.:0552103697 ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







