ಚಲಾವಣೆ ರದ್ದು ನಿರ್ಧಾರ ವಾಪಸ್ಸಿಗೆ ಕೇಜ್ರಿವಾಲ್ ಆಗ್ರಹ

ಹೊಸದಿಲ್ಲಿ: ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟು ಚಲಾವಣೆ ರದ್ದತಿ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲುಸ್ತುವಾಋಇಯಲ್ಲಿ ತನಿಖೆ ನಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಇದು ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಲಾ ಮಾಡಿಕೊಡುವ ಉದ್ದೇಶದ ದೊಡ್ಡ ಹಗರಣ ಎಂದು ಬಿಜೆಪಿ ಮೇಲೆ ಪರೋಕ್ಷವಾಗಿ ಬೆಟ್ಟು ಮಾಡಿದ್ದಾರೆ.
ಈ ಸಂಬಂಧ ದೆಹಲಿ ವಿಧಾನಸಬೆಯ ಒಂದು ದಿನದ ತುರ್ತು ಅಧಿವೇಶನದಲ್ಲಿ ಅವರು ನಿರ್ಣಯ ಮಂಡಿಸಿದರು. ಆಪ್ ಪ್ರಾಬಲ್ಯದ ಸದನದಲ್ಲಿ, ಈ ಬಗ್ಗೆ ವಿಸ್ತತ ಚರ್ಚೆ ನಡೆಸಿ, ಈ ನಿರ್ಧಾರವನ್ನು ವಾಪಾಸು ಪಡೆಯುವಂತೆ ಕೇಂಧ್ರಕ್ಕೆ ಸೂಚಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆಗ್ರಹಿಸಿದೆ.
ಚರ್ಚೆಯಲ್ಲಿ ಪಾಲ್ಗೊಂಡ ಎಎಪಿಯ ಓಕ್ಲಾ ಶಾಸಕ ಅಮಾನತುಲ್ಲಾ ಖಾನ್ ಈ ಚಲಾವಣೆ ರದ್ದತಿ ನಿರ್ಧಾರದಿಂದ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳ ಅರಿವು ಮೋದಿಗಿಲ್ಲ. ಏಕೆಂದರೆ ಅವರಿಗೆ ಪತ್ನಿ ಅಥವಾ ಮಕ್ಕಳಿಲ್ಲ ಎಂದು ಲೇವಡಿ ಮಾಡಿದರು.
ಖಾನ್ ಹೇಳಿಕೆಯನ್ನು ಖಂಡಿಸಿದ ವಿರೋಧ ಪಕ್ಷದ ವಿಜೇಂದ್ರ ಗುಪ್ತ ಅವರು, ಕೇಜ್ರಿವಾಲ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರು. ಇದು ಎಎಪಿ ಸದಸ್ಯರನ್ನು ಕೆರಳಿಸಿತು. ಉದ್ರಿಕ್ತ ಶಾಸಕರು ಸಬಾಧ್ಯಕ್ಷರ ಪೀಠದತ್ತ ಧಾವಿಸಿ ಘೋಷಣೆ ಕೂಗಿದ್ದರಿಂದ ಸದನವನ್ನು ಮುಂದೂಡಬೇಕಾಯಿತು.
ಇದಕ್ಕೂ ಮುನ್ನ ಬ್ಯಾಂಕ್ ಎಟಿಎಂಗಳ ಮುಂದೆ ಹಣಕ್ಕಾಗಿ ಕಾಯುವ ವೇಳೆ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ವೌನ ಆಚರಿಸಿದರು. ಇದನ್ನು ಖಂಡಿಸಿ ಬಿಜೆಪಿ ಶಾಸಕ ಜಗದೀಶ್ ಪ್ರಧಾನ್ ಹಾಗೂ ಗುಪ್ತ ಸಬಾತ್ಯಾಗ ಮಾಡಿದರು.







