ಬಾರತ- ಇಸ್ರೇಲ್: ಸಂಬಂಧ ಇನ್ನಷ್ಟು ಗಾಢ
.jpeg)
ಹೊಸದಿಲ್ಲಿ: ಬಾರತ ಹಾಗೂ ಇಸ್ರೇಲ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸಲು ಉಯ ದೇಶಗಳು ನಿರ್ಧರಿಸಿದ್ದು, ರಕ್ಷಣೆ ಹಾಗೂ ಯೋತ್ಪಾದಕ ವಿರೋಧಿ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಗಾಢಸಂಬಂಧವನ್ನು ಬೆಳೆಸಿಕೊಳ್ಳಲು ಒಪ್ಪಿಕೊಂಡಿವೆ.
ಪ್ರತ್ಯೇಕತೆ ಹಾಗೂ ಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಮೂಲಕ, ಉಗ್ರ ಸಂಘಟನೆಗಳ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿವೆ.
ವ್ಯಾಪಾರ ಹಾಗೂ ಹೂಡಿಕೆ, ಕೃಷಿ, ಜಲ ಸಂಪನ್ಮೂಲ ಹಾಗೂ ಸೈಬರ್ ಅಪರಾಧ ಕ್ಷೇತ್ರದಲ್ಲೂ ವಿಸ್ತತ ಸಹಕಾರಕ್ಕೆ ಉಯ ದೇಶಗಳು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಅಧ್ಯಕ್ಷ ರುವೀನ್ ರಿವ್ಲಿನ್ ಅವರ ಸುಧೀರ್ ಚರ್ಚೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ. ಇಸ್ರೇಲ್ ಅಧ್ಯಕ್ಷರ ಮೊಟ್ಟಮೊದಲ ಬಾರತ ಬೇಟಿ ಇದಾಗಿದೆ. ಉಯ ದೇಶಗಳ ಜನರು ಪ್ರತ್ಯೇಕತೆ ಹಾಗೂ ಉಗ್ರಗಾಮಿ ಚಟುವಟಿಕೆಗಳ ಅಪಾಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥ ಜಾಲವನ್ನು ಮಟ್ಟಹಾಕುವ ಸಂಬಂಧ ಪರಸ್ಪರ ಸಹಕಾರಕ್ಕೆ ಉಯ ದೇಶಗಳು ಒಪ್ಪಿಕೊಂಡಿವೆ ಎಂದು ಮೋದಿ ಹೇಳಿಕೆ ನೀಡಿದ್ದಾರೆ.
ಯೋತ್ಪಾದನೆ ಎನ್ನುವುದು ಜಾಗತಿಕ ಸವಾಲು ಎನ್ನುವ ಅರಿವು ನಮಗಿದೆ. ಇದಕ್ಕೆ ಯಾವುದೇ ಗಡಿ ಇಲ್ಲ ಹಾಗೂ ಇತರ ಸಂಘಟಿತ ಅಪರಾಧಗಳಿಗೆ ಇದರ ಸಂಪರ್ಕ ಇದೆ ಎಂದು ಹೇಳಿದ್ದಾರೆ. ಪಾಕಿಸ್ತಾನವನ್ನು ನೇರವಾಗಿ ಹೆಸರಿಸದೇ, ನಮ್ಮ ನೆರೆಯ ದೇಶವೇ ಇದರ ಮೂಲ. ಇದೇ ದೇಶ ಯೋತ್ಪಾದನೆ ಹರಡುತ್ತಿದೆ ಎಂದು ಚುಚ್ಚಿದ್ದಾರೆ.
ಯೋತ್ಪಾದಕ ಜಾಲದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಸಂಘಟಿತ ಹೋರಾಟ ನಡೆಸಬೇಕು. ಅದನ್ನು ಪಸರಿಸುವ ದೇಶದ ವಿರುದ್ಧ ಹೋರಾಡಬೇಕು. ಇದಕ್ಕೆ ವಿಪಲವಾದಲ್ಲಿ ಅಥವಾ ವೌನವಾಗಿದ್ದರೆ ಅದು ಯೋತ್ಪಾಧನೆಯನ್ನು ಉತ್ತೇಜಿಸಿದಂತೆ ಎಂದು ಹೇಳಿದರು.
ರಿವ್ಲಿನ್ ಅವರ ಬೇಟಿಯು ಉಯ ದೇಶಗಳ ಸಂಬಂಧ ಕಟ್ಟುವ ಹೊಸ ಮನ್ವಂತರಕ್ಕೆ ದೊಡ್ಡ ಉತ್ತೇಜನ ಎಂದು ಬಣ್ಣಿಸಿದ ಅವರು, ಉಯ ದೇಶಗಳು ಬೆಳೆಯುತ್ತಿರುವ ರಕ್ಷಣಾ ಪಾಲುದಾರಿಕೆಯ ಮಹತ್ವವನ್ನು ಅರಿತುಕೊಂಡು, ಸಂಬಂಧವನ್ನು ಮತ್ತಷ್ಟು ವಿಸ್ತತಗೊಳಿಸಲು ನಿರ್ಧರಿಸಿವೆ. ಉತ್ಪಾದನೆ ಪಾಲುದಾರಿಕೆ ನಿರ್ಧಾರವನ್ನೂ ಉಯ ದೇಶಗಳ ಮುಖಂಡರು ಕೈಗೊಂಡಿದ್ದಾರೆ.







