ರಿಸರ್ವ್ ಬ್ಯಾಂಕ್ ಆದೇಶದಿಂದ ಡಿಸಿಸಿ ಬ್ಯಾಂಕ್‌ಗೆ ನಷ್ಟ: ಧರ್ಮೇಗೌಡ
ಸಾಲ ಮರುಪಾವತಿಯಾಗದೆ ಕಂಗೆಟ್ಟ ಡಿಸಿಸಿ ಬ್ಯಾಂಕ್

ಆದೇಶ ಹಿಂಪಡೆಯಲು ಆಗ್ರಹ
ನೋಟ್ ರದ್ದತಿ ಎಫೆಕ್ಟ್
ಚಿಕ್ಕಮಗಳೂರು, ನ.15: ಭಾರತೀಯ ರಿಸರ್ವ್ ಬ್ಯಾಂಕ್ 2016ರ ನವೆಂಬರ್ 14ರ ಸುತ್ತೋಲೆಯಲ್ಲಿ ಡಿಸಿಸಿ ಬ್ಯಾಂಕ್‌ಗಳು ಹಳೆಯ ರೂ. 500 ಮತ್ತು 1,000 ಮುಖ ಬೆಲೆಯ ನೋಟುಗಳ ಠೇವಣಿ ಮತ್ತು ಬದಲಾವಣೆ ಮಾಡಬಾರದಾಗಿ ಆದೇಶಿಸಿದೆ. ಈ ಕ್ರಮದಿಂದ ಡಿಸಿಸಿ ಬ್ಯಾಂಕ್‌ಗಳು ನಷ್ಟಕ್ಕೀಡಾಗಲಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಎಸ್.ಎಲ್. ಧರ್ಮೇಗೌಡ ನಬಾರ್ಡ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ಬ್ಯಾಂಕ್‌ಗಳಲ್ಲಿ ಸುಮಾರು 2.50 ಲಕ್ಷಕ್ಕೂ ಹೆಚ್ಚು ಗ್ರಾಹಕರು, 13,000 ಸ್ವಸಹಾಯ ಸಂಘಗಳು ಮತ್ತು 35,000 ಕಿಸಾನ್ ಕ್ರೆಡಿಟ್ ಸಾಲ ಪಡೆದ ರೈತ ಸದಸ್ಯರಿದ್ದಾರೆ. ಇವರೆಲ್ಲಾ ನಮ್ಮ ಬ್ಯಾಂಕಿನ ಮೂಲಕವೇ ವ್ಯವಹಾರ ನಡೆಸುವವರಾಗಿದ್ದಾರೆ. ಇವರಿಂದ ಸುಮಾರು 2,000 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಯುತ್ತವೆ. ರಿಸರ್ವ್ ಬ್ಯಾಂಕ್‌ನ ಹಳೆಯ ರೂ. 500, 1,000 ಮುಖ ಬೆಲೆಯ ನೋಟುಗಳ ಠೇವಣಿ ಮತ್ತು ಬದಲಾವಣೆ ಡಿಸಿಸಿ ಬ್ಯಾಂಕುಗಳಲ್ಲಿ ಮಾಡಬಾರದು ಎಂಬ ರಿಸರ್ವ್ ಬ್ಯಾಂಕ್‌ನ ಆದೇಶದಿಂದ ನಮ್ಮ ಬ್ಯಾಂಕಿನ ಗ್ರಾಹಕರ ದಿನನಿತ್ಯದ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದಿದ್ದಾರೆ.
ಬ್ಯಾಂಕ್ ಕಷಿ ಸಾಲ, ಗಹ ಸಾಲ, ವಾಹನ ಸಾಲ, ಸಂಬಳ ಸಾಲ, ಬಂಗಾರದ ಆಭರಣ ಸಾಲ, ಸ್ವಸಹಾಯ ಸಂಘಗಳ ಸಾಲ ಇತ್ಯಾದಿ ಕಷಿಯೇತರ ಸಾಲಗಳನ್ನೂ ನೀಡಿದೆ. ಸಾಲಗಾರರು ಸಾಲ ಮರುಪಾವತಿಗೆ ಬಂದರೂ ರಿಸರ್ವ್ ಬ್ಯಾಂಕ್‌ನ ಆದೇಶ ಮುಳ್ಳಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬ್ಯಾಂಕ್ ಜಿಲ್ಲೆಯಲ್ಲಿ 19 ಶಾಖೆಗಳನ್ನು ಹೊದಿದ್ದು, ನಬಾರ್ಡ್/ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳಂತೆ ಕೆಲಸ ನಿರ್ವಹಿಸುತ್ತಿದೆ. ಅಲ್ಲದೆ, ರಿಸರ್ವ್ ಬ್ಯಾಂಕ್‌ನ ಪರವಾನಿಗೆ ಹೊಂದಿದೆ. ಗ್ರಾಹಕರಿಗೆ ಕೆ.ವೈ.ಸಿ ನಾರ್ಮ್ಸ್ ರೀತಿ ನಿರ್ವಹಣೆ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್‌ನ ಪ್ರಸ್ತುತ ಆದೇಶದಿಂದ ದೇಶದ ಎಲ್ಲಾ ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿ, ಠೇವಣಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಕೂಡಲೇ ತನ್ನ ಆದೇಶ ಹಿಂಪಡೆದು ಡಿಸಿಸಿ ಬ್ಯಾಂಕ್‌ಗಳೂ ಹಳೆಯ ರೂ. 500, 1,000 ಮುಖಬೆಲೆಯ ನೋಟುಗಳ ಠೇವಣಿ ಮತ್ತು ಬದಲಾವಣೆ ಮಾಡಲು ಆದೇಶ ನೀಡಬೇಕೆಂದು ಎಸ್.ಎಲ್. ಧರ್ಮೇಗೌಡ ನಬಾರ್ಡ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮನವಿ ಮಾಡಿದ್ದಾರೆ.





