. ಅಪಘಾತ: ಯುಕೆಜಿ ಮಗು ಸಾವು
ಸಾಗರ, ನ.15: ತಾಲೂಕಿನ ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರುಘಾಮಠ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪಾವನಿ(5) ಎಂಬ ಮಗು ಅಪಘಾತದಲ್ಲಿ ಮರಣ ಹೊಂದಿದ ಘಟನೆ ಸೋಮವಾರ ನಡೆದಿದೆ. ದಾಸಕೊಪ್ಪ ಗ್ರಾಮದ ವಾಸಿ ಗೋಪಾಲ್ ಎಂಬವರ ಪುತ್ರಿಯಾಗಿರುವ ಪಾವನಿ ಸೋಮವಾರ ಸಂಜೆ ಶಾಲೆ ಮುಗಿಸಿ ಶಾಲಾ ವಾಹನದಲ್ಲಿ ದಾಸಕೊಪ್ಪ ಗ್ರಾಮದ ಗಣಪತಿ ಎಂಬವರ ಅಂಗಡಿ ಮುಂಭಾಗದಲ್ಲಿ ಇಳಿದಿದ್ದಾಳೆ. ಪಾವನಿ ರಸ್ತೆ ದಾಟಿ ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಶಾಲಾ ವಾಹನ ವೇಗವಾಗಿ ಮುಂದೆ ಚಲಿಸಿ, ರಸ್ತೆ ದಾಟುತ್ತಿದ್ದ ಪಾವನಿಗೆ ಢಿಕ್ಕಿ ಹೊಡೆದಿದ್ದು, ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಈ ಸಂಬಂಧ ಬಾಲಕಿ ತಂದೆ ಗೋಪಾಲ್ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
Next Story





