ಅಮೆರಿಕ: ಹಿಜಾಬ್ ಧರಿಸಿದ ಮಹಿಳೆಯನ್ನು ಸುಡುವ ಬೆದರಿಕೆ

ಶಿಕಾಗೊ, ನ. 15: ಹಿಜಾಬ್ ಧರಿಸಿದ ಮುಸ್ಲಿಮ್ ಮಹಿಳೆಯೊಬ್ಬರ ಸಮೀಪ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಹಿಜಾಬ್ ತೆಗೆಯದಿದ್ದರೆ ಆಕಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿರುವ ಘಟನೆ ಅಮೆರಿಕದ ಮಿಶಿಗನ್ ರಾಜ್ಯದ ಆ್ಯನ್ ಆರ್ಬರ್‌ನಲ್ಲಿ ಕಳೆದ ವಾರ ನಡೆದಿದೆ.
‘‘ಈ ದ್ವೇಷ ಅಪರಾಧ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ’’ ಎಂದು ಯೂನಿವರ್ಸಿಟಿ ಪಬ್ಲಿಕ್ ಸೇಫ್ಟಿ ವಿಭಾಗದ ಡಯಾನ್ ಬ್ರೌನ್ ಹೇಳಿರುವುದಾಗಿ ‘ನ್ಯೂಯಾರ್ಕ್ ಡೇಲಿ ನ್ಯೂಸ್’ ವರದಿ ಮಾಡಿದೆ.
ಬೆದರಿದ ಮಹಿಳೆ ಹಿಜಾಬ್ ತೆಗೆದು ಅಲ್ಲಿಂದ ಹೋದರು ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿಯ ಪತ್ತೆಗಾಗಿ ಶೋಧ ನಡೆಯುತ್ತಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿಜಯಿಯಾದ ಬಳಿಕ ಘಟನೆ ನಡೆದಿದೆ.
Next Story





