ಪೆಟ್ರೋಲ್ ಬಂಕ್‌ಗಳಲ್ಲಿ ನ.24ರವರೆಗೆ ಅಮಾನ್ಯ ನೋಟುಗಳ ಚಲಾವಣೆ
ಮಂಗಳೂರು, ನ.15: ಕೇಂದ್ರ ಸರಕಾರದ ಸೂಚನೆಯಂತೆ ನ.24ರ ಮಧ್ಯರಾತ್ರಿ 12ರವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಹಳೆಯ 500, 1,000 ರೂ. ನೋಟುಗಳನ್ನು ಸ್ವೀಕರಿಸ ಲಾಗುವುದು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಕಾರ್ನಾಡ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
500, 1,000 ರೂ. ನೋಟುಗಳನ್ನು ನೀಡಿ 100, 200 ರೂ.ನ ಪೆಟ್ರೋಲ್, ಡೀಸೆಲ್ ತುಂಬಿಸಿದರೆ ಚಿಲ್ಲರೆ ನೀಡಲು ಸಮಸ್ಯೆಯಾಗುತ್ತದೆ. ಇದನ್ನು ಗ್ರಾಹಕರು ಅರ್ಥ ಮಾಡಿಕೊಂಡು ಸಹಕರಿಸುವಂತೆ ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್‌ನ ರಾಜ್ಯ ಉಪಾ ಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಪ್ರಭು ಉಪಸ್ಥಿತರಿದ್ದರು.
Next Story





