ಕರೆನ್ಸಿ ನೋಟು ರದ್ದತಿ ಪ್ರಸ್ತಾಪವಿಲ್ಲ: ಪಾಕ್
ಇಸ್ಲಾಮಾಬಾದ್, ನ. 15: ಪಾಕಿಸ್ತಾನ ಭಾರತದ ಮಾದರಿಯನ್ನು ಅನುಸರಿಸುವುದಿಲ್ಲ. ತನ್ನ 5,000 ರೂಪಾಯಿ ನೋಟುಗಳನ್ನು ಅದು ರದ್ದುಪಡಿಸುವುದಿಲ್ಲ ಅಥವಾ 40,000 ರೂ. ಪ್ರೈಝ್ ಬಾಂಡ್‌ಗಳನ್ನು ಅದು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಮಾಧ್ಯಮಗಳು ಇಂದು ವರದಿ ಮಾಡಿವೆ.
ಈ ಸಂಬಂಧ ಹುಟ್ಟಿಕೊಂಡಿರುವ ಗಾಳಿಸುದ್ದಿಗಳು ಆಧಾರರಹಿತ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಸೋಮವಾರ ಹೇಳಿದ್ದಾರೆ. ‘‘ಇಂಥ ಯಾವುದೇ ಪ್ರಸ್ತಾಪ ಸರಕಾರದ ಪರಿಶೀಲನೆಯಲ್ಲಿಲ್ಲ’’ ಎಂದು ‘ಡಾನ್’ ವರದಿ ಮಾಡಿದೆ.
ಗರಿಷ್ಠ ವೌಲ್ಯದ ಕರೆನ್ಸಿ ನೋಟುಗಳು ಮತ್ತು ಪ್ರೈಝ್ ಬಾಂಡ್‌ಗಳನ್ನು ಹಿಂದಕ್ಕೆ ಪಡೆಯುವ ಪ್ರಸ್ತಾಪ ಸರಕಾರದ ಪರಿಶೀಲನೆಯಲ್ಲಿದೆ ಎಂಬುದಾಗಿ ಪ್ರಧಾನಿ ನವಾಝ್ ಶರೀಫ್ ಅವರ ವಿಶೇಷ ಸಹಾಯಕ ಹರೂನ್ ಅಖ್ತರ್ ಖಾನ್ ಇದಕ್ಕೂ ಮುನ್ನ ಹೇಳಿದ್ದರು.
Next Story





