ಚಲಾವಣೆ ರದ್ದಾದ 2.5 ಕೋಟಿ ರೂ.ವೌಲ್ಯದ ನೋಟು ವಶ: ಇಬ್ಬರ ಬಂಧನ
ರಾಜ್‌ಕೋಟ್, ನ.15: ಜಿಲ್ಲೆಯ ವೀರಪುರ ಪಟ್ಟಣದ ಬಳಿಕ 2.5 ಕೋಟಿ ರೂಪಾಯಿ ವೌಲ್ಯದ 500 ಹಾಗೂ 1000 ರೂಪಾಯಿ ನೋಟುಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಿನಿ ಲಾರಿಯಲ್ಲಿ ನಗದು ಸಾಗಾಟ ಮಾಡುತ್ತಿದ್ದಾಗ, ರಾತ್ರಿ ಗಸ್ತಿನ ಪೊಲೀಸರು ಹಿಡಿದರು. 10 ಪೊಟ್ಟಣಗಳಲ್ಲಿ ನೋಟುಗಳನ್ನು ಇಡಲಾಗಿದ್ದು, ಪ್ರತಿ ಪೊಟ್ಟಣದಲ್ಲಿ ತಲಾ 25 ಲಕ್ಷ ರೂಪಾಯಿಗಳಿದ್ದವು. ಎಲ್ಲ ಹಣವನ್ನು ಪೆಟ್ಟಿಗೆಯಲ್ಲಿ ಇಡಲಾಗಿತ್ತು ಎಂದು ವೀರಪುರ ತಾಲೂಕು ಪಿಎಸ್‌ಐ ಘನಶ್ಯಾಮ ಸಿಂಗ್ ಜಡೇಜಾ ಹೇಳಿದ್ದಾರೆ.
ಚಾಲಕ ರಜನಿ ಕುಂತ್ ಹಾಗೂ ಸಹಾಯಕ ಬಾವಂಜಿ ಪಟೇಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
Next Story





