‘ಬಾಯಿಗೆ ಕಾಲು ಹಾಕಿಕೊಂಡ’ ಮೇಯರ್ ರಾಜೀನಾಮೆ
ಮಾಡಿದ ಘನಂದಾರಿ ಕೆಲಸವೇನು ?

ವರ್ಜೀನಿಯಾ,ನ.16 : ಅಮೇರಿಕಾದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮ ಅವರನ್ನು ಗುರಿಯಾಗಿಸಿ ಜನಾಂಗೀಯ ನಿಂದನೆಗೈದು ಫೇಸ್ ಬುಕ್ ಪೋಸ್ಟ್ ಒಂದನ್ನು ಮಾಡಿದ ಹಾಗೂ ಅದಕ್ಕೆ ಕಮೆಂಟ್ ಮಾಡಿದಘನಂದಾರಿ ಕಾರ್ಯಕ್ಕೆವೆಸ್ಟ್ ವರ್ಜೀನಿಯಾದ ಮೇಯರ್ ಹಾಗೂ ಇನ್ನೊಬ್ಬರು ಕೌಂಟಿ ಅಧಿಕಾರಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ.
ಕೌಂಟಿ ಅಧಿಕಾರಿಯಾಗಿರುವ ಪಮೇಲಾ ಟೇಲರ್ ಅವರು ಕ್ಲೇ ಕೌಂಟಿ ಡೆವಲೆಪ್ ಮೆಂಟ್ ಕಾರ್ಪೊರೇಶನ್ ಇಲ್ಲಿ ನಿರ್ದೇಶಕಿಯಾಗಿದ್ದು ತಮ್ಮ ಫೇಸ್ ಬುಕ್ ಪುಟದಲ್ಲಿ ‘‘ವೈಟ್ ಹೌಸ್ ನಲ್ಲಿ ಫಸ್ಟ್ ಲೇಡಿಯಾಗಿಸುಂದರಿಯೊಬ್ಬರನ್ನು ನೋಡುವುದು ಬಹಳಷ್ಟು ಆಹ್ಲಾದಕರವಾಗಲಿದೆ. ಹೀಲ್ಸ್ ಧರಿಸಿದ ಕೋತಿ(ಏಪ್) ನೋಡಿ ನನಗೆ ಸಾಕಾಗಿದೆ,’’ ಎಂದು ಟೇಲರ್ ಟ್ವೀಟ್ ಮಾಡಿದ್ದರೆಂದು ಸಿಎನ್‌ಎನ್ ಅಂಗಸಂಸ್ಥೆಯಾಗಿರುವ ಡಬ್ಲ್ಯೂಎಸ್‌ಎಝೆಡ್ ಗೆ ದೊರಕಿದ ಸ್ಕ್ರೀನ್ ಶಾಟ್ ಒಂದರಿಂದ ತಿಳಿದು ಬರುತ್ತದೆ.
ಈ ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ವೆಸ್ಟ್ ವರ್ಜೀನಿಯಾ ಮೇಯರ್ ಬೆವರ್ಲಿ ವೇಲಿಂಗ್‘‘ಜಸ್ಟ್ ಮೇಡ್ ಮೈ ಡೇ ಪ್ಯಾಮ್’’ ಎಂದು ಬರೆದಿದ್ದೂ ಸ್ಕ್ರೀನ್ ಶಾಟ್ ನಲ್ಲಿ ಕಾಣಬಹುದಾಗಿದೆ.
ವೇಲಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಟೇಲರ್ ಅವರನ್ನು ಹುದ್ದೆಯಿಂದ ಕೆಳಗಿಳಸಲಾಗಿತ್ತೇ ಅಥವಾ ಅವರೇ ರಾಜೀನಾಮೆ ನೀಡಿದ್ದರೇ ಎಂಬುದುತಿಳಿಯದು ಎಂದು ಕ್ಲೇ ಕೌಂಟಿ ಆಯುಕ್ತ ಗ್ರೆಗ್ ಫಿಟ್ಸ್ ವಾಟರ್ ಹೇಳಿದ್ದಾರೆ.





