ರವಿ ಓಮಯ್ಯ ಖಾರ್ವಿಗೆ ಸನ್ಮಾನ

ಭಟ್ಕಳ, ನ.16: ಇಲ್ಲಿನ ಸ್ನೇಹ ವಿಶೇಷ ಶಾಲೆಯ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಜನಪದ ನೃತ್ಯ ಕಾರ್ಯಕ್ರಮದಲ್ಲಿ ಇಲ್ಲಿನ ಬಂದರ್ನ ರವಿ ಓಮಯ್ಯ ಖಾರ್ವಿಯವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ,ಅಖಿಲ ಭಾರತ ಕೊಂಕಣ ಖಾರ್ವಿ ಮಹಾಸಭಾದ ಹಿರಿಯ ನಿರ್ದೇಶಕ ವಸಂತ ಖಾರ್ವಿ, ಕುಂದಾಪುರದ ವಾಗ್ಜ್ಯೋತಿ ಶ್ರವಣ ಶಾಲೆಯ ಮುಖ್ಯೋಧ್ಯಾಪಕ ಎಂ.ರವೀಂದ್ರ, ರಾಬಿತಾ ಸೊಸೈಟಿಯ ವ್ಯವಸ್ಥಾಪಕ ಮನಾಝೀರ್ ಸುಕ್ರಿ, ನಝೀರ್ ಕಾಶೀಂಜಿ, ಕುಟುಮೇಶ್ವರ ಸೌಹಾರ್ಧ ಬ್ಯಾಂಕಿನ ಅಧ್ಯಕ್ಷ ರತ್ನಾಕರ ಖಾರ್ವಿ, ಸ್ನೇಹ ಶಾಲೆಯ ಸಂಸ್ಥಾಪಕಿ ಮಾಲತಿ ಉದ್ಯಾವರ ಉಪಸ್ಥಿತರಿದ್ದರು.
Next Story





