ಹಿಂದೂ ಐಕ್ಯವೇದಿಕೆ ಕಾರ್ಯಕರ್ತನ ಕೊಲೆ: 59 ಆರೋಪಿಗಳ ಖುಲಾಸೆ

ಕೋಝಿಕ್ಕೋಡ್, ನ. 16: ಹಿಂದೂ ಐಕ್ಯವೇದಿಕೆಯ ವತಿಯಿಂದ ಕೈವೇಲಿ ಎಂಬಲ್ಲಿ ನಡೆದಿದ್ದ ಧರಣಿಗೆ ಬಾಂಬೆಸೆದು ಓರ್ವ ವ್ಯಕ್ತಿ ಮೃತನಾಗಿದ್ದಾನೆ ಎನ್ನುವ ಪ್ರಕರಣದ ಆರೋಪಿಗಳನ್ನು ಕೋರ್ಟು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಸಿಪಿಐಎಂ ನಾಯಕರ ಸಹಿತ ಐವತ್ತೊಂಬತ್ತು ಮಂದಿ ವಿರುದ್ಧ ಹತ್ಯೆ ಆರೋಪ ಹೊರಿಸಲಾಗಿತ್ತು. ಧರಣಿಯಲ್ಲಿ ಭಾಗವಹಿಸಿದ್ದ ಕುನ್ನುಮ್ಮಲ್ ನೀಟ್ಟೂರ್ ವೆಳ್ಳೋಲಿಯ ಅನೂಪ್(29) ಈ ಸಂದರ್ಭದಲ್ಲಿ ಹತ್ಯೆ ಯಾಗಿದ್ದ. ಮಾರಾಡ್ ವಿಶೇಷ ಅಡಿಷನಲ್ ಸೆಶನ್ ಕೋರ್ಟು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿ ತೀರ್ಪಿತ್ತಿದೆ.
2013 ಡಿಸೆಂಬರ್ 16ಕ್ಕೆ ಘಟನೆ ನಡೆದಿತ್ತು. ಅಂದಿನ ನರಿಪ್ಪಟ್ಟ ಪಂಚಾಯತ್ ಅಧ್ಯಕ್ಷ ಟಿಪಿ ಪವಿತ್ರನ್, ಸಿಪಿಎಂ ನರಿಪ್ಪಟ್ಟ್ ಶಾಖಾ ಕಾರ್ಯದರ್ಶಿ ವಿ,ನಾಣು, ತಿನೂರು ಶಾಖಾ ಸಮಿತಿ ಕಾರ್ಯದರ್ಶಿ ಕೆ. ಬಾಬು, ಶಾಖಾ ಸಮಿತಿಯ ಒಂಬತ್ತು ಸದಸ್ಯರು ಸಹಿತ ಐವತ್ತೊಂಬತ್ತು ಮಂದಿಯನ್ನು ಕೋರ್ಟು ಖುಲಾಸೆಗೊಳಿಸಿದೆ. ಅನೂಪ್‌ಜೊತೆ ಗಾಯಗೊಂಡ ಮೊದಲ ಮೂರು ಪ್ರಮುಖ ಸಾಕ್ಷಿಗಳ ಹೇಳಿಕೆ ಅತಿಶಯೋಕ್ತಿಯಿಂದ ಕೂಡಿದೆ ಮತ್ತು ಪರಸ್ಪರ ವಿರುದ್ಧವಾಗಿವೆ. ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಸೂಚಿಸಿದೆ ಎಂದು ವರದಿ ತಿಳಿಸಿದೆ.







