ಡಿ.19 ಕ್ಕೆ ಹಿಲರಿ ಕ್ಲಿಂಟನ್ ಗೆ ಅಮೆರಿಕದ ಅಧ್ಯಕ್ಷರಾಗುವ ಅವಕಾಶ ?

ವಾಷಿಂಗ್ಟನ್, ನ.16 : ಅಮೆರಿಕಾದ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಇಲೆಕ್ಟೋರಲ್ ಕಾಲೇಜ್ ಡಿಸೆಂಬರ್ 19 ರಂದು ಚುನಾಯಿಸಬಹುದೇ ? ಸಂವಿಧಾನಾತ್ಮಕವಾಗಿ ಇದು ಸಾಧ್ಯವಾಗಬಹುದಾದರೂ, ಚುನಾವಣಾ ತಜ್ಞರ ಪ್ರಕಾರ ಇದು ಸಾಧ್ಯವಿಲ್ಲ.
4.3 ಮಿಲಿಯನ್ ಗೂ ಅಧಿಕ ಜನರು ಸಹಿ ಹಾಕಿರುವ ಚೇಂಜ್.ಆರ್ಗ್ ಪಿಟಿಶನ್ ಇಲೆಕ್ಟೋರಲ್ ಕಾಲೇಜು ಸದಸ್ಯರಗೆ ಹಿಲರಿ ಕ್ಲಿಂಟನ್ ಪರವಾಗಿ ಮತ ಚಲಾಯಿಸಲು ಉತ್ತೇಜಿಸುತ್ತಿದೆ. ಈ ಅರ್ಜಿಯ ಪ್ರಕಾರ ``ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ದೇಶದ ಸೇವೆಗೈಯ್ಯಲು ಅನರ್ಹರು ಹಾಗೂ ಪಾಪ್ಯುಲರ್ ವೋಟ್ ಗೆದ್ದ ಹಿಲರಿ ಕ್ಲಿಂಟನ್ ಅವರು ಅಧ್ಯಕ್ಷರಾಗಬೇಕು.''
``ಅವರೆಲ್ಲಾ ಅವರ ರಾಜ್ಯಗಳು ಮತ ಚಲಾಯಿಸಿದ ರೀತಿಯಲ್ಲಿಯೇ ಮತ ಚಲಾಯಿಸಿದರೆ, ಡೊನಾಲ್ಡ್ ಟ್ರಂಪ್ ಗೆಲ್ಲಬಹುದು. ಆದರೆ ಅವರು ಮನಸ್ಸು ಮಾಡಿದರೆ ಹಿಲರಿ ಕ್ಲಿಂಟನ್ ಅವರನ್ನೂ ಆಯ್ಕೆ ಮಾಡಬಹುದು. ಮತದಾರರಿಗೆ ತಮ್ಮ ರಾಜ್ಯಗಳು ಯಾರ ಪರವಾಗಿ ಹೆಚ್ಚು ಮತ ಚಲಾಯಿಸಿವೆಯೆಂಬುದನ್ನು ಕಡೆಗಣಿಸಿ ಸೆಕ್ರಟರಿ ಕ್ಲಿಂಟನ್ ಅವರ ಪರವಾಗಿ ಮತ ಚಲಾಯಿಸಬೇಕು'' ಎಂದು ಚೇಂಜ್.ಆರ್ಗ್ ಅರ್ಜಿ ಹೇಳಿದೆ.
ಅಭ್ಯರ್ಥಿಗಳು ಕೆಲ ರಾಜ್ಯಗಳಲ್ಲಿ ದೊಡ್ಡ ಅಂತರದಲ್ಲಿ ಹಾಗೂ ಇನ್ನು ಕೆಲ ರಾಜ್ಯಗಳಲ್ಲಿ ಸಣ್ಣ ಅಂತರದಲ್ಲಿ ಗೆದ್ದಿದ್ದರೆ ಅಭ್ಯರ್ಥಿಯೊಬ್ಬ ಅಲ್ಲಿ ಗೆಲ್ಲದೇ ಇದ್ದರೂ ಇಲೆಕ್ಟೋರಲ್ ಕಾಲೇಜು ಚುನಾವಣೆಯಲ್ಲಿ ಗೆಲ್ಲಬಹುದು. ಅಮೆರಿಕಾದ ಇತಿಹಾಸದಲ್ಲಿ ಹೀಗೆ ಮೂರು ಬಾರಿ ಆಗಿದ್ದು. 2000ರಲ್ಲಿ ಜಾರ್ಜ್ ಬುಶ್ ಚುನಾವಣೆಯಲ್ಲಿ ವಿಜಯಿಯಾಗಿದ್ದರೂ ಅವರು ಪಾಪ್ಯುಲರ್ ಮತವನ್ನು ಅಲ್ ಗೋರೆ ವಿರುದ್ಧ 5.4 ಲಕ್ಷ ಮತಗಳಿಂದ ಸೋತಿದ್ದರು. ಆದರೆ ಇಲೆಕ್ಟೋರಲ್ ಮತದಲ್ಲಿ ಅವರು 266 ರಲ್ಲಿ 271 ಕಡೆಗಳಲ್ಲಿ ಗೆದ್ದಿದ್ದರು.
ಇದಕ್ಕೂ ಬಹಳ ಮುಂಚೆ 1824 ರಲ್ಲಿ ಆಂಡ್ರಿವ್ ಜಾಕ್ಸನ್ ಹೆಚ್ಚು ಪಾಪ್ಯುಲರ್ ಹಾಗೂ ಇಲೆಕ್ಟೋರಲ್ ಮತಗಳನ್ನು ಪಡೆದಿದ್ದರೂ, ಜಾನ್ ಖ್ವಿನ್ಸಿ ಆಡಮ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗಿನ ಚುನಾವಣೆಯಲ್ಲಿ ಕೂಡ ಹಿಲರಿ ಕ್ಲಿಂಟನ್ ಅವರು ನವೆಂಬರ್ 15 ರ ವರೆಗೆ 7.75 ಲಕ್ಷಕ್ಕೂ ಅಧಿಕ ಪಾಪ್ಯುಲರ್ ಮತಗಳನ್ನು ಪಡೆದಿದ್ದರು. ತಜ್ಞರ ಪ್ರಕಾರ 538 ಚುನಾಯಿತ ಸದಸ್ಯರು ಚಲಾಯಿಸಿದ ಮತಗಳನ್ನು ಎಣಿಕೆ ಮಾಡುವ ಪ್ರಕ್ರಿಯೆ ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತದೆ. ಟ್ರಂಪ್ ಅವರ ಬೆಂಬಲಿಗ ಸದಸ್ಯರು ಈ ಇಲೆಕ್ಟೋರಲ್ ಕಾಲೇಜು ಚುನಾವಣೆಯಲ್ಲಿ ತಮ್ಮ ನಾಯಕನಿಗೆ ಬೆಂಬಲ ನೀಡದೆ ಹಿಲರಿ ಅವರನ್ನು ಬೆಂಬಲಿಸಿದರೆ ಆಕೆ ಅಧ್ಯಕ್ಷೆಯಾಗಿ ಆಯ್ಕೆಯಾಗಿ ದೇಶದ 45 ನೇ ಅಧ್ಯಕ್ಷೆಯಾಗಿ ಜನವರಿ 20 ರಂದು ಪ್ರಮಾಣವಚನ ಸ್ವೀಕರಿಸಬಹುದು ಎನ್ನುತ್ತಾರೆ ಒಬ್ಬ ತಜ್ಞ. ಆದರೆ ವಾಸ್ತವವಾಗಿ ಇದು ಸಾಧ್ಯವಿಲ್ಲವಾಗಿದ್ದು ಹಾಗೇನಾದರೂ ಆದಲ್ಲಿ ಅದನ್ನು ಅಧ್ಯಕ್ಷ ಒಬಾಮ ಹಾಗೂ ಹಿಲರಿ ಕ್ಲಿಂಟನ್ ಅವರೇ ವಿರೋಧಿಸಬಹುದು







