ಭಾರತದ ಗಡಿಯ ಸಮೀಪ ಪಾಕ್ ಸೇನೆಯ ಕವಾಯತು

ಇಸ್ಲಾಮಾಬಾದ್,ನ.16: ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಭಾರತೀಯ ಗಡಿಗೆೆ ಹೊಂದಿಕೊಂಡಿರುವ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರ ಸಮೀಪ ವ್ಯೆಹಾತ್ಮಕ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯು ಕವಾಯತನ್ನು ನಡೆಸುತ್ತಿದೆ.ಪ್ರಧಾನಿ ನವಾಝ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಜರಾಹಿಲ್ ಶರೀಫ್ ಅವರು ಉಪಸ್ಥಿತರಿದ್ದು ಸೇನೆ ಮತ್ತು ವಾಯುಪಡೆಯ ಯುದ್ಧ ಸನ್ನದ್ಧತೆಯನ್ನು ಪುನರ್‌ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಹೆಲಿಕಾಪ್ಟರ್ ಗನ್‌ಶಿಪ್‌ಗಳು ಮತ್ತು ಪದಾತಿ ದಳದ ಸೈನಿಕರು ಕವಾಯತಿನಲ್ಲಿ ಪಾಲ್ಗೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಯೊಂದಿಗಿನ ಗುಂಡಿನ ಕಾಳಗದಲ್ಲಿ ಏಳು ಪಾಕಿಸ್ತಾನಿ ಸೈನಿಕರು ಹತರಾಗಿದ್ದರು.
Next Story





