'varthabharati.in’ ಮಕ್ಕಳನ್ನು ಹುಡುಕುವ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಮಂಗಳೂರು, ನ. 16: ಮಕ್ಕಳ ದಿನಾಚರಣೆಯ ಪ್ರಯುಕ್ತ ‘'varthabharati.in’ ಆಯೋಜಿಸಿದ ಮಕ್ಕಳನ್ನು ಹುಡುಕುವ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಮಂಗಳವಾರ ನಗರದ ವೆಲೆನ್ಸಿಯಾದ ‘ವಾರ್ತಾಭಾರತಿ’ ಕಚೇರಿಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
‘ಸ್ಪಾರ್ ಹೈಪರ್ ಮಾರ್ಕೆಟ್’ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಈ ಸ್ಪರ್ಧೆಯ ವಿಜೇತರಿಗೆ ನಗರದ ಸಿಟಿ ಸೆಂಟರ್‌ನ ಸ್ಪಾರ್ ಹೈಪರ್ ಮಾರ್ಕೆಟ್‌ನ ಸ್ಟೋರ್ ಮ್ಯಾನೇಜರ್ ಗುರುಪ್ರಸಾದ್ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಪ್ರಸಾದ್ ಅವರು, ಬಹಳ ದೊಡ್ಡ ಸಂಖ್ಯೆಯಲ್ಲಿ ಓದುಗರು ವಾರ್ತಾಭಾರತಿಯ ಆಹ್ವಾನಕ್ಕೆ ಸ್ಪಂದಿಸಿದ್ದಾರೆ. ಇಂತಹ ಆರೋಗ್ಯಕರ ಸರ್ಧೆಯೊಂದಲ್ಲಿ ಸಹಯೋಗ ವಹಿಸುವ ಅವಕಾಶ ವಹಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸುದ್ದಿಸಂಪಾದಕ ಬಿ.ಎಂ.ಬಶೀರ್, ಬ್ಯೂರೊ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್., ಹಿರಿಯ ಹಿರಿಯ ವರದಿಗಾರ ಅಬ್ದುಲ್ ಶುಕೂರ್ ಮಲ್ಪೆ ವಿಜೇತರಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.ಸ್ಪಾರ್ ಹೈಪರ್ ಮಾರ್ಕೆಟ್ ಡಿಪಾರ್ಟ್‌ಮೆಂಟ್ ಮ್ಯಾನೇಜರ್‌ಗಳಾದ ಸುಕೇಶ್, ಶಿವರಾಜ್ , ವಾರ್ತಾಭಾರತಿಯ ಹಿರಿಯ ಉಪಸಂಪಾದಕ ರಾಜೇಶ್ ನಾಯ್ಕ, ಜಾಹೀರಾತು ವಿಭಾಗದ ಶರೀಫ್ ಕೋಡಿಜಾಲ್ ಉಪಸ್ಥಿತರಿದ್ದರು.
ಕೇವಲ ಎರಡು ದಿನಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಛಾಯಾಚಿತ್ರಗಳು ಬಂದಿದ್ದವು.
ಬಹುಮಾನ ಪಡೆದ ಛಾಯಾಚಿತ್ರಗಳು
ಪ್ರಥಮ-ಅಥರ್ವ ಕೆ. ಬಳ್ಕೂರು, ಕುಂದಾಪುರ. ಕರುಣಾಕರ ಬಳ್ಕೂರು ಮತ್ತು ಶಿಲ್ಪಾ ದಂಪತಿಯ ಪುತ್ರ.
ದ್ವಿತೀಯ -ಆಯಿಶಾ ಹನೂನ ಸುರತ್ಕಲ್. ಅಬ್ದುಸ್ಸಲಾಂ ಮತ್ತು ರಮೀಝಾ ದಂಪತಿಯ ಪುತ್ರಿ.
ತೃತೀಯ-ಹಾಶಿಮ್ ಪಾಣೆಮಂಗಳೂರು. ಹಝರ್ ಮತ್ತು ಹಫೀಝಾ ದಂಪತಿಯ ಪುತ್ರ.







