ಆತ್ಮಹತ್ಯಾ ದಾಳಿ: 4 ಭದ್ರತಾ ಸಿಬ್ಬಂದಿ ಸಾವು

ಕಾಬೂಲ್, ನ. 16: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದಾಗ ಕನಿಷ್ಠ ನಾಲ್ವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಅಫ್ಘಾನ್ ರಕ್ಷಣಾ ಸಚಿವಾಲಯದ ಆವರಣದ ಸಮೀಪದ ಪುಲಿ ಮಹ್ಮೂದ್ ಖಾನ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್ ದ್ವಿಚಕ್ರ ವಾಹನದಲ್ಲಿದ್ದನೆ ಅಥವಾ ನಡೆದುಕೊಂಡು ಬರುತ್ತಿದ್ದನೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಗೆ ಯಾವ ಗುಂಪೂ ಹೊಣೆ ಹೊತ್ತುಕೊಂಡಿಲ್ಲ.
Next Story





