1 ವರ್ಷದ ಮಗುವಿಗೆ ಗುಂಡು ಹಾರಿಸಿದ 2 ವರ್ಷದ ಮಗು

ಬ್ಯಾಟನ್ ರೋಗ್, ನ. 16: ಅಮೆರಿಕದ ಲೂಸಿಯಾನ ರಾಜ್ಯದ ರಾಜಧಾನಿ ಬ್ಯಾಟನ್ ರೋಗ್‌ನಲ್ಲಿ ನಿಲ್ಲಿಸಿದ ಕಾರೊಂದರ ಒಳಗೆ ಎರಡು ವರ್ಷದ ಮಗುವೊಂದು ತನ್ನ ಒಂದು ವರ್ಷದ ತಮ್ಮನ ಮುಖಕ್ಕೆ ಗುಂಡು ಹಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಶಿಶು ಗಂಭೀರವಾಗಿ ಗಾಯಗೊಂಡಿದೆ.
ಘಟನೆ ನಡೆದ ಸಂದರ್ಭ ಇಬ್ಬರು ವಯಸ್ಕರು ಸ್ಥಳದಲ್ಲಿದ್ದರು, ಆದರೆ, ಎರಡು ವರ್ಷದ ಮಗುವಿನ ಕೈಗೆ ಬಂದೂಕು ಹೇಗೆ ಬಂತು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Next Story





