Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ‘ಹೋಟೆಲ್ ಓಷಿಯನ್ ಪರ್ಲ್’...

ಉಡುಪಿ: ‘ಹೋಟೆಲ್ ಓಷಿಯನ್ ಪರ್ಲ್’ ಪ್ರಾರಂಭ

ವಾರ್ತಾಭಾರತಿವಾರ್ತಾಭಾರತಿ16 Nov 2016 8:29 PM IST
share
ಉಡುಪಿ: ‘ಹೋಟೆಲ್ ಓಷಿಯನ್ ಪರ್ಲ್’ ಪ್ರಾರಂಭ

ಉಡುಪಿ, ನ.16: ದೇಶಾದ್ಯಂತ ಸುಮಾರು 200 ರೆಸ್ಟೋರೆಂಟ್‌ಗಳನ್ನು ನಡೆಸುತ್ತಿರುವ ಜೆಆರ್‌ಬಿ ಗ್ರೂಪ್‌ನ ‘ದಿ ಓಷಿಯನ್ ಪರ್ಲ್’ ಹೊಟೇಲ್ ಉಡುಪಿಯ ಕಡಿಯಾಳಿಯಲ್ಲಿ ಉದ್ಘಾಟನೆಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಈ ಐಷಾರಾಮಿ ಹೊಟೇಲ್‌ನ್ನು ಉದ್ಘಾಟಿಸಿದರು.

ದೇಶದ ಹೊಟೇಲ್ ಉದ್ಯಮದ ದಿಗ್ಗಜರಲ್ಲೊಬ್ಬರಾದ ಕಾರ್ಕಳ ಮೂಲದ ಜಯರಾಮ ಬನಾನ್ ಅವರು ತನ್ನ ಮಾಲಕತ್ವದ ಜೆಆರ್‌ಬಿ ಗ್ರೂಪ್ ಮೂಲಕ ಆರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹೊಟೇಲ್ ದಿ ಓಷಿಯನ್ ಪರ್ಲ್‌ನ್ನು ತೆರೆದು ಯಶಸ್ವಿಯಾಗಿದ್ದರು. ಇದೀಗ ಬನಾನ್, ಉಡುಪಿಯ ಜನತೆಗೂ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಒದಗಿಸುವ ಗುರಿಯೊಂದಿಗೆ ಹುಟ್ಟೂರಿನಲ್ಲಿ ಎರಡನೇ ಹೊಟೇಲ್ ತೆರೆದಿದ್ದಾರೆ.

ಉಡುಪಿ-ಮಣಿಪಾಲ ಮುಖ್ಯರಸ್ತೆಗೆ ತಾಗಿಕೊಂಡೇ ಕಡಿಯಾಳಿಯಲ್ಲಿ ಬಿಳಿ ಬಣ್ಣದ ಭವ್ಯ, ಆಕರ್ಷಕ ಶೈಲಿಯಲ್ಲಿ ವಿಶ್ವದರ್ಜೆಯ ಹೊಟೇಲ್ ತಲೆಎತ್ತಿ ನಿಂತಿದೆ. ಹೊಟೇಲ್‌ನಲ್ಲಿ ಸಾಗರರತ್ನ ವೆಜ್ ರೆಸ್ಟೋರೆಂಟ್, ಟೈಡ್ 24 ಗಂಟೆಗಳ ಕಾಫಿಶಾಪ್, ಕೋರಲ್ ಮಲ್ಟಿ ಕ್ವಿಜಿನ್ ಡೈನ್ ರೆಸ್ಟೋರೆಂಟ್, ದಿ ಜಾಜ್ಹ್‌ಲಾಂಜ್‌ಬಾರ್, ಜೇಡ್, ಪಾರ್ಟಿಹಾಲ್, ಬ್ಯಾಂಕ್ವೆಟ್‌ಹಾಲ್ ವಿಭಾಗಗಳು ಗ್ರಾಹಕರ ಸೇವೆಗೆ ನಾಳೆಯಿಂದ ಲಭ್ಯವಾಗಲಿದೆ.

ಗ್ರಾಹಕರ ತೃಪ್ತಿ ಜಯರಾಮ ಬನಾನ್ ಅವರ ಪ್ರಥಮ ಕಾಳಜಿಯಾಗಿದ್ದು, ತಮ್ಮ ಹೊಟೇಲ್‌ಗಳಲ್ಲಿ ರುಚಿ,ಶುಚಿ, ಪುಷ್ಟಿದಾಯಕ ಆಹಾರ ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ವಿಶ್ವದರ್ಜೆಯ ಹೊಟೇಲ್ ಜನಸಾಮಾನ್ಯರಿಗೂ ಎಟಕಬೇಕೆಂಬ ಉದ್ದೇಶದಿಂದ ಮಂಗಳೂರಿನಲ್ಲಿ ಕೇವಲ 60ರೂ.ಗೆ ಸಸ್ಯಾಹಾರಿ ಊಟವನ್ನು ನೀಡಿದ್ದು, ಇದೀಗ ಉಡುಪಿಯಲ್ಲೂ ಅದೇ ರೀತಿ ಕಡಿಮೆ ಬೆಲೆಗೆ ಸಸ್ಯಾಹಾರಿ ಊಟ ನೀಡುವ ನಿರ್ಧಾರ ಮಾಡಲಾಗಿದೆ ಎಂದು ಹೊಟೇಲ್‌ನ ಉಪಾದ್ಯಕ್ಷ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಹೊಟೇಲ್‌ನ್ನು ಸಚಿವ ಪ್ರಮೋದ್ ಮದ್ವರಾಜ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವೌಲಾನ ಶಫಿ ಸಅದಿ, ಉಡುಪಿ ಬಿಷಪ್ ಅ.ವಂ. ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಶಶಿರಾಜ್ ಕುಂದರ್, ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಗೋಪಾಲ ಭಂಡಾರಿ, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಪುರುಷೋತ್ತಮ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಟ್ಟಾರು ರತ್ನಾಕರ ಹೆಗ್ಡೆ, ಕೆ.ಉದಯಕುಮಾರ ಶೆಟ್ಟಿ, ಮನೋಹರ ಶೆಟ್ಟಿ, ಪ್ರದೀಪ್ ಜಿ.ಪೈ, ಎ.ಜೆ.ಶೆಟ್ಟಿ, ವಿಲಾಸ್ ನಾಯಕ್, ಟಿ.ಸತೀಶ್ ಯು.ಪೈ, ಸುಪ್ರಸಾದ್ ಶೆಟ್ಟಿ, ಸಿರಾಜ್ ಅಹ್ಮದ್ ಮುಂತಾದವರು ಉಪಸ್ಥ್ಝಿತರಿದ್ದರು.

ಹೊಟೇಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಬನಾನ್, ಉಪಾಧ್ಯಕ್ಷ ಬಿ.ಎನ್.ಗಿರೀಶ್, ಜನರಲ್ ಮ್ಯಾನೇಜರ್ ಬಿಜು ವರ್ಗೀಸ್, ದಿನೇಶ್ ಬನಾನ್, ಪ್ರೊಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಹೊಟೇಲ್ ಬಿಲ್ಟಿಂಗ್ ಪ್ರಮೋಟರ್ ಮಹಮ್ಮದ್ ಸಲೀಂ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X