ವಿದೇಶದಲ್ಲಿ ಸಿಲುಕಿಕೊಂಡ ಕಾರವಾರ ಯುವಕ : ತಾಯ್ನಡಿಗೆ ಕರೆಸಿಕೊಳ್ಳಲು ಮೊರೆ

ಕಾರವಾರ, ನ.16: ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದ್ದ ಯುವಕನೋರ್ವ ತೊಂದರೆಗೆ ಸಿಲುಕಿ ಸ್ವದೇಶ್ಕಕೆ ಹಿಂದಿರುಗಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಅವರನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಸಹಾಯ ಹಸ್ತ ನೀಡಬೇಕೆಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಕೋರಿಕೊಂಡಿದ್ದಾರೆ. ಕಾರವಾರ ತಾಲೂಕಿನ ಮಲ್ಲಾಪುರದ ವೀಣೇಶ್‌ಬಾಂದೇಕರ್ ಎಂಬ ಯುವಕ 2015ರಲ್ಲಿ ಕುವೈತ್‌ಗೆ ಕೆಲಸಕ್ಕೆಂದು ತೆರಳಿದ್ದರು. ಅಪೇಕ್ಷೆಯ ವೃತ್ತಿ ಸಿಗದೆ, ಸಿಕ್ಕ ನೌಕರಿಯಲ್ಲಿ ಸಮಯಕ್ಕೆ ಸರಿಯಾಗ ಸಂಬಳವಿಲ್ಲದೆ ಊಟ, ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಈ ಮಧ್ಯೆ ವೀಣೇಶ್ ಅವರ ಆರೋಗ್ಯ ಸ್ಥಿತಿಯ ಹದಗೆಟ್ಟಿದ್ದು ನೌಕರಿ ನೀಡಿದ ಮಾಲಕ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ಹಿಂದೇಟು ಹಾಕುತ್ತಿದ್ದಾನೆ. ತಮಗೆ ಕಿಡ್ನಿ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು ಸರಿಯಾಗಿ ಚಿಕಿತ್ಸೆ ಕೊಡಿಸುತ್ತಿಲ್ಲ. ಸ್ವದೇಶಕ್ಕೆ ಮರಳಲು ತನಗೆ ಸಹಾಯ ಮಾಡಿ ಎಂದು ಮಾಧವ ನಾಯಕ ಅವರ ವಾಟ್ಸ್‌ಆ್ಯಪ್‌ಗೆ ಸಂದೇಶಗಳನ್ನು ಕಳುಹಿಸಿ ಎಲ್ಲ ಮಾಹಿತಿಗಳನ್ನು ಕಳುಹಿಸಿದ್ದಾರೆ.
ಸರಿಯಾಗಿ ಸಂಬಳ ಸಿಗದಿದ್ದರೂ ಕೆಲಸ ಮಾಡಿಸಿಕೊಳ್ಳ ಲಾಗುತ್ತಿದೆ. ಒತ್ತಾಯ ಪೂರ್ವಕವಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಭಾರತಕ್ಕೆ ಮರಳುವ ಯತ್ನ ನಡೆಸಿದಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿರುವ ಬಗ್ಗೆ ದ್ವನಿ ಮುದ್ರಣ ಹಾಗೂ ಲಿಖಿತ ಸಂದೇಶವನ್ನು ವೀಣೇಶ್ ಬಾಂದೇಕರ್ ರವಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೆಯಲ್ಲಿ ಬಡತನ ಇದ್ದ ಕಾರಣ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದು, ಇಲ್ಲಿನ ಪರಿಸ್ಥಿತಿ ಸರಿಯಾಗಿಲ್ಲ. ಹಿಂದೊಮ್ಮೆ ಸಣ್ಣ ಪ್ರಮಾಣದಲ್ಲಿ ಕಾರು ಅಪಘಾತವಾದಾಗ 60 ಸಾವಿರ ವಸೂಲಿ ಮಾಡಿದರು. ಸದ್ಯ ಮಾಸಿಕ 1,700 ೂ. ವೇತನ ನೀಡುತ್ತಿದ್ದಾರೆ. ನೀಡುತ್ತಿರುವ ವೇತನ ಇಲ್ಲಿ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ. ಕೆಲಸಕ್ಕೆ ಸೇರುವ ಸಂದರ್ಭದಲ್ಲಿ 23 ಸಾವಿರ ರೂ. ವೇತನ ನೀಡುವುದಾಗಿ ಗೋವಾ ಮೂಲದ ಏಜೆನ್ಸಿ ನಂಬಿಸಿ ಕುವೈತ್‌ಗೆ ಕರೆಸಿಕೊಳ್ಳಲಾಗಿತ್ತು ಎಂದು ಅಳಲು ತೋಡಿಕೊಂಡಿದ್ದು, ತನ್ನನ್ನು ಭಾರತಕ್ಕೆ ಕರೆಯಿಸಿಕೊಳ್ಳಲು ಸಹಕರಿಸಿ ಎಂದು ಒತ್ತಾಯಿಸಿರುವುದಾಗಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಯುವಕ ಪಡುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನಕುಮಾರ್ ಅವರು ಮನವಿ ಸ್ವೀಕರಿಸಿ ಈ ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ಕಳುಹಿಸಲಾಗುವುದು. ಜಿಲ್ಲಾಡಳಿತದಿಂದ ಆಗುವಷ್ಟು ಸಹಾಯ ಮಾಡುವುದಾಗಿ ರವಸೆ ನೀಡಿದರು.





