ಅಕ್ಷರ ಪತ್ರಿಕಾ ಬಳಗಕ್ಕೆ ಚಾಲನೆ

ಮಂಗಳೂರು,ನ.16: ಸಾಹಿತ್ಯಗಳು ಸಮಾಜದಲ್ಲಿ ಸಾಮರಸ್ಯತೆಯನ್ನು ಸೃಷ್ಟಿಸಬೇಕು, ಅಂತಹ ಸಾಹಿತ್ಯಗಳಿಂದ ಶಾಂತಿ ಮತ್ತು ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವೆಂದು ಎಸ್ಸಸ್ಸಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಮುಂಟುಗೋಳಿ ಅಭಿಪ್ರಾಯಪಟ್ಟರು.
ಅವರು ಯುವ ಪ್ರತಿಭೆಗಳ ಸಾಮಾಜಿಕ ಜಾಲ ತಾಣ ಪತ್ರಿಕೆ ’ಅಕ್ಷರ ಇ ಮ್ಯಾಗಝೀನ್’ ಇದರ ಪತ್ರಿಕಾ ಬಳಗಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ಸಂಪಾದಕ ಬಿ.ಎಸ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು.
ರಶೀದ್ ವಿಟ್ಲ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಬ್ದುರ್ರಹ್ ಮಾನ್ ಹಾಜಿ ಪ್ರಿಂಟೆಕ್, ಶಾಕಿರ್ ಎಮ್ಮೆಸ್ಸಿ ಶುಭ ಹಾರೈಸಿದರು. ಇದೇ ಸಂದರ್ಭ ಬರಹ ರಂಗದಲ್ಲಿ ಯಶಸ್ವಿ 25 ವರ್ಷಗಳನ್ನು ಪೂರೈಸಿದ ಕೆ.ಎಂ ಸಿದ್ದೀಕ್‌ಮೋಂಟುಗೋಳಿಯವರನ್ನು ಅಕ್ಷರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಅಕ್ಷರ ಪತ್ರಿಕಾ ಬಳಗದ ಲುಕ್ಮಾನ್ ಅಡ್ಯಾರ್,ಬಾಪು ಅಮ್ಮೆಂಬಳ,ನಿಝಾಂ ಮಂಚಿ,ಪಿ.ಕೆ.ಎಂ ಹನೀಫ್,ನಾಸಿರ್ ಸಜಿಪ ಮುಂತಾದವರು ಉಪಸ್ಥಿತರಿದ್ದರು.
ಉಪಸಂಪಾದಕ ಎಂ.ಎಂ ಮಹ್ರೂಫ್ ಆತೂರು ಸ್ವಾಗತಿಸಿ ವಂದಿಸಿದರು.





