ಸಹಕಾರಿ ಬ್ಯಾಂಕ್ ನೌಕರರಿಂದ ಪ್ರತಿಭಟನೆ

ಕಾಸರಗೋಡು, ನ.16: ನೋಟು ಅಮಾನ್ಯಗೊಳಿಸಿದ ಹಿನ್ನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಹವಾಲಾ ಹಣ ದಾಸ್ತಾನಿದೆ ಎಂದು ಸಹಕಾರಿ ಬ್ಯಾಂಕ್‌ಗಳ ಎಲ್ಲ ಹಣಕಾಸಿನ ವ್ಯವ ಹಾರವನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದನ್ನು ವಿರೋಧಿಸಿ ಸಹಕಾರಿ ಸಂಘದ ನೇತೃತ್ವದಲ್ಲಿ ಕಾಸರಗೋಡಿನಲ್ಲಿಂದು ಪ್ರತಿಭಟನೆ ನಡೆಯಿತು.
ಸಹಕಾರಿ ಬ್ಯಾಂಕ್ ನೌಕರರು ಜಿಲ್ಲಾ ಆದಾಯ ತೆರಿಗೆ ಕಚೇರಿಗೆ ಜಾಥಾ ನಡೆಸಿದರು. ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಯಲ್ಲಿ ಹೊರಟ ಪ್ರತಿಭಟನಾಕಾರರು ಆದಾಯ ತೆರಿಗೆ ಕಚೇರಿ ಮುಂಭಾಗ ದಲ್ಲಿ ಧರಣಿ ಕುಳಿತರು.
ಧರಣಿಯನ್ನು ಶಾಸಕ ಎಂ.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಬಾಲಕೃಷ್ಣ ವೊರ್ಕೊಡ್ಲು, ವಿ.ಭಾಸ್ಕರನ್, ಮಾಜಿ ಶಾಸಕ ಸಿ.ಎಚ್.ಕುಂಞಂಬು ಮೊದಲಾದವರು ನೇತೃತ್ವ ನೀಡಿದರು.
Next Story





