ಏರ್ ಇಂಡಿಯಾ ಆಹಾರದಲ್ಲಿ ಜಿರಳೆ

ಹೊಸದಿಲ್ಲಿ, ನ. 17 : ಹೈದರಾಬಾದ್ ನಿಂದ ದಿಲ್ಲಿ ಮೂಲಕ ಶಿಕಾಗೋಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ನೀಡಿದ ಆಹಾರದಲ್ಲಿ ಜಿರಳೆಯೊಂದು ಪತ್ತೆಯಾಗಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಹಾಗು ಆಹಾರ ಪೂರೈಕೆದಾರರಿಗೆ ನೋಟಿಸ್ ನೀಡಲಾಗಿದೆ.
ತನಗೆ ನೀಡಿದ ಆಹಾರದಲ್ಲಿ ಜಿರಳೆ ಇರುವ ಚಿತ್ರವನ್ನು ಪ್ರಯಾಣಿಕ ರಾಹುಲ್ ರಘುವಂಶಿ ಟ್ವೀಟ್ ಮಾಡಿದ ಬಳಿಕ ವಿಮಾನ ಸಂಸ್ಥೆ ಇದಕ್ಕಾಗಿ ಕ್ಷಮೆ ಕೋರಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ತನಿಖೆಗೆ ಆದೇಶಿಸಲಾಗಿದೆ ಹಾಗು ಆಹಾರ ಪೂರೈಕೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಕಾರ್ಪೊರೇಟ್ ಸಂವಹನ ವ್ಯವಸ್ಥಾಪಕ ಧನಂಜಯ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಶೂನ್ಯ ಸಹನೆ ನೀತಿ ಸಂಸ್ಥೆಯದ್ದಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಏರ್ ಇಂಡಿಯಾ ಟ್ವೀಟ್ ಮಾಡಿದೆ.
.@airindiain now serves cockroach for vegetarian meals on AI127 #sicktomystomach #traumatized #cockroachinfood pic.twitter.com/SX1DR2Cufy
— Rahul Raghuvanshi (@BostonNewsHound) November 16, 2016
Next Story







