Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಎರಡನೆ ಕ್ರಿಕೆಟ್‌ ಟೆಸ್ಟ್ ನಲ್ಲಿ ಪೂಜಾರ...

ಎರಡನೆ ಕ್ರಿಕೆಟ್‌ ಟೆಸ್ಟ್ ನಲ್ಲಿ ಪೂಜಾರ , ಕೊಹ್ಲಿ ಶತಕ; ಭಾರತ 317/4

ವಾರ್ತಾಭಾರತಿವಾರ್ತಾಭಾರತಿ17 Nov 2016 3:36 PM IST
share
ಎರಡನೆ ಕ್ರಿಕೆಟ್‌ ಟೆಸ್ಟ್ ನಲ್ಲಿ ಪೂಜಾರ , ಕೊಹ್ಲಿ ಶತಕ;  ಭಾರತ 317/4

ವಿಶಾಖಪಟ್ಟಣ, ನ.17: ನಾಯಕ ವಿರಾಟ್ ಕೊಹ್ಲಿ ಮತ್ತು ಅಗ್ರ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ದಾಖಲಿಸಿದ ಶತಕಗಳ ನೆರವಿನಲ್ಲಿ ಭಾರತ ಇಂದು ಇಲ್ಲಿ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಸ್ಪರ್ಧಾತ್ಮ ಕ ಮೊತ್ತ ದಾಖಲಿಸಿದೆ.
ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಕೊಹ್ಲಿ ಮತ್ತು ಪೂಜಾರ ದಾಖಲಿಸಿದ 226 ರನ್‌ಗಳ ಜೊತೆಯಾಟದ ನೆರವಿನಲ್ಲಿ ಭಾರತ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 317 ರನ್ ಗಳಿಸಿತ್ತು.
ಔಟಾಗದೆ 151 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಮತ್ತು 1 ರನ್ ಗಳಿಸಿರುವ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಔಟಾಗದೆ ಕ್ರೀಸ್ ನಲ್ಲಿದ್ದಾರೆ.
ಆರಂಭಿಕ ಕುಸಿತ: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತ್ತು. ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ (0)ಮತ್ತು ಮುರಳಿ ವಿಜಯ್ (20) ಬೇಗನೆ ಔಟಾದರು.
ಟೆಸ್ಟ್ ಕ್ರಿಕೆಟ್‌ಗೆ ಎರಡು ವರ್ಷಗಳ ಬಳಿಕ ವಾಪಸಾಗಿದ್ದರೂ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ದಿಲ್ಲಿಯ ಹಿರಿಯ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ನಿರಾಕರಿಸಲಾಗಿತ್ತು.
ಕನ್ನಡಿಗ ಲೋಕೇಶ್ ರಾಹುಲ್‌ಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ರಾಹುಲ್ ನ್ಯೂಝಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಡಿದ್ದರು. ಬಳಿಕ ಅವರು ಗಾಯದ ಸಮಸ್ಯೆಯಿಂದ ತಂಡದಿಂದ ದೂರವಾಗಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫಾರ್ಮ್ ಕಂಡು ಕೊಂಡಿದ್ದ ರಾಹುಲ್ ಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು.
ರಾಹುಲ್‌ಗೆ ದೊರೆತ ಅವಕಾಶವನ್ನು ಸದಪಯೋಗ ಮಾಡಲು ಸಾಧ್ಯವಾಗಲಿಲ್ಲ. ಸ್ಟುವರ್ಟ್ ಬ್ರಾಡ್ ಅವರು ತನ್ನ ಪ್ರಥಮ ಓವರ್‌ನಲ್ಲೇ ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ನಾಲ್ಕು ಬೌಂಡರಿಗಳ ನೆರವಿನಲ್ಲಿ 20 ರನ್ ಗಳಿಸಿ ಕ್ರೀಸ್‌ನಲ್ಲಿ ನಿಲ್ಲುವ ಸೂಚನೆ ನೀಡಿದ್ದರು. ಆದರೆ ಇಂಗ್ಲೆಂಡ್‌ನ ಸ್ಟಾರ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ವಿಜಯ್‌ಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ.
 ಆ್ಯಂಡರ್ಸನ್ ಅವರ ಬೌನ್ಸರ್ ವಿಜಯ್ ಅವರ ಗ್ಲೌವ್‌ಗೆ ಬಡಿದು ಹಾರಿತ್ತು.ಸ್ಟೋಕ್ ಸರಳ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ವಿಜಯ್ ಔಟಾದರು. ಆಗ ತಂಡದ ಸ್ಕೋರ್ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 22 ಆಗಿತ್ತು. ಆ್ಯಂಡರ್ಸನ್ ಅವರು ವೇಗದ ಬೌಲರ್ ಕ್ರಿಸ್ ವೊಕೇಸ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ಆ್ಯಂಡರ್ಸನ್ ಭುಜನೋವಿನ ಕಾರಣದಿಂದಾಗಿ ಕಳೆದ ಆಗಸ್ಟ್‌ನಿಂದ ಇಂಗ್ಲೆಂಡ್ ಪರ ಆಡಿರಲಿಲ್ಲ. 226 ರನ್‌ಗಳ ಜೊತೆಯಾಟ: ಮೂರನೆ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಜೊತೆಯಾದರು. ಭಾರತ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೊಹ್ಲಿ ಮತ್ತು ಪೂಜಾರ ಜೊತೆಯಾಟದಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳ ಬೆವರಿಳಿಸಿದರು. ಹಲವು ಬಾರಿ ರನೌಟಾಗುವ ಅವಕಾಶ ಎದುರಾಗಿದ್ದರೂ, ಇಬ್ಬರು ತಪ್ಪಿಸಿಕೊಂಡು ಶತಕ ತಲುಪಿದರು.
40ನೆ ಟೆಸ್ಟ್ ಆಡುತ್ತಿರುವ ಪೂಜಾರ 10ನೆ ಶತಕ ದಾಖಲಿಸಿದರು. 59.2ನೆ ಓವರ್‌ನಲ್ಲಿ ರಶೀದ್ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ಪೂಜಾರ ಶತಕ ಪೂರ್ಣಗೊಳಿಸಿದರು. 184 ಎಸೆತಗಳಲ್ಲಿ 11ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಪೂಜಾರ ಶತಕ ಪೂರ್ಣಗೊಳಿಸಿದರು.
ಪೂಜಾರ ಸತತ ಮೂರನೆ ಶತಕ ಪೂರ್ಣಗೊಳಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಮೂರನೆ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಪೂಜಾರ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು.
 ಪೂಜಾರ ಅವರು 66.4ನೆ ಓವರ್‌ನಲ್ಲಿ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಕೀಪರ್ ಬೈರ್‌ಸ್ಟೋವ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪೂಜಾರ 204 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಇರುವ 119 ರನ್ ಗಳಿಸಿದರು.
ಕೊಹ್ಲಿ 50ನೆ ಟೆಸ್ಟ್‌ನಲ್ಲಿ ಶತಕ: ನಾಯಕ ವಿರಾಟ್ ಕೊಹ್ಲಿಗೆ ಇದು ಸ್ಮರಣೀಯ ಟೆಸ್ಟ್ ಅವರು ಶತಕದ ಮೂಲಕ ಈ ಟೆಸ್ಟ್‌ನ್ನು ಹೆಚ್ಚು ಸ್ಮರಣೀಯವನ್ನಾಗಿಸಿದರು. ಕೊಹ್ಲಿ 62.1ನೆ ಓವರ್‌ನಲ್ಲಿ ಆ್ಯಂಡರ್ಸನ್ ಎಸೆತದಲ್ಲಿ 2 ರನ್ ತೆಗೆಯುವುದರೊಂದಿಗೆ ಶತಕ ಪೂರ್ಣಗೊಳಿಸಿದರು.
ಪೂಜಾರ ದಾಖಲಿಸಿದ ಬೆನ್ನಲ್ಲೆ ಕೊಹ್ಲಿ 14ನೆ ಶತಕ ಬಾರಿಸಿದರು. ಕೊಹ್ಲಿ 56 ರನ್ ಗಳಿಸಿದ್ದಾಗ ರಶೀದ್ ಎಸೆತದಲ್ಲಿ ಸ್ಟೋಕ್ಸ್ ಕ್ಯಾಚ್ ಕೈ ಚೆಲ್ಲುವುದರೊಂದಿಗೆ ಜೀವದಾನ ಪಡೆದಿದ್ದರು.
ನಾಲ್ಕನೆ ವಿಕೆಟ್‌ಗೆ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ 68 ರನ್‌ಗಳ ಜೊತೆಯಾಟ ನೀಡಿದರು. ದಿನದ ಆಟ ಕೊನೆಗೊಳ್ಳಲು ಸ್ವಲ್ಪ ಹೊತ್ತು ಬಾಕಿ ಇದ್ದಾಗ ರಹಾನೆ ಅವರು ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಕೀಪರ್ ಬೈರ್‌ಸ್ಟೋವ್‌ಗೆ ಕ್ಯಾಚ್ ನೀಡಿದರು. ಬಳಿಕ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಕೊಹ್ಲಿಗೆ ಜೊತೆಯಾದರು. ಇವರು ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
 ಕೊಹ್ಲಿ 241 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ಸಹಾಯದಿಂದ 151 ರನ್ ಗಳಿಸಿದ್ದಾರೆ. ದ್ವಿಶತಕ ದಾಖಲಿಸುವ ಯೋಜನೆಯಲ್ಲಿದ್ದಾರೆ.
ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 44ಕ್ಕೆ 3 ವಿಕೆಟ್ ಮತ್ತು ಸ್ಟುವರ್ಟ್ ಬ್ರಾಡ್ 39ಕ್ಕೆ 1 ವಿಕೆಟ್ ಹಂಚಿಕೊಂಡರು.
,,,,,,,,,,,,,,,,,,

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್:

90 ಓವರ್‌ಗಳಲ್ಲಿ 317/4

ಮುರಳಿ ವಿಜಯ್ ಸಿ ಸ್ಟೋಕ್ಸ್ ಬಿ ಆ್ಯಂಡರ್ಸನ್ 20

ರಾಹುಲ್ ಸಿ ಸ್ಟೋಕ್ಸ್ ಬಿ ಬ್ರಾಡ್ 00

ಚೇತೇಶ್ವರ ಪೂಜಾರ ಸಿ ಬೈರ್‌ಸ್ಟೋವ್ ಬಿ ಆ್ಯಂಡರ್ಸನ್ 119

ವಿರಾಟ್ ಕೊಹ್ಲಿ ಅಜೇಯ 151

ಅಜಿಂಕ್ಯ ರಹಾನೆ ಸಿ ಬೈರ್‌ಸ್ಟೋವ್ ಬಿ ಆ್ಯಂಡರ್ಸನ್ 23

ಆರ್.ಅಶ್ವಿನ್ ಅಜೇಯ 01

ಇತರ 03

ವಿಕೆಟ್ ಪತನ: 1-6, 2-22, 3-248, 4-316

ಬೌಲಿಂಗ್ ವಿವರ:

ಆ್ಯಂಡರ್ಸನ್ 16-3-44-3

ಬ್ರಾಡ್ 12-02-39-1

ಸ್ಟೋಕ್ಸ್ 13-3-52-0

ಅನ್ಸಾರಿ 12-1-45-0

ರಶೀದ್ 26-1-85-0

ಮೊಯಿನ್ ಅಲಿ 11-0-50-0

ದ್ವಿತೀಯ ಟೆಸ್ಟ್ ಹೈಲೈಟ್ಸ್

6: ವಿರಾಟ್ ಕೊಹ್ಲಿ ಕಳೆದ ಏಳು ಶತಕಗಳ ಪೈಕಿ ಆರು ಬಾರಿ 140ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕಳೆದ 7 ಇನಿಂಗ್ಸ್‌ಗಳಲ್ಲಿ 141, 169, 147, 103, 200, 211 ಹಾಗೂ ಅಜೇಯ 151.

67: ಚೇತೇಶ್ವರ ಪೂಜಾರ 3000 ಟೆಸ್ಟ್ ರನ್ ಪೂರೈಸಲು 67 ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಈ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್‌ರ ಸಾಧನೆ ಸರಿಗಟ್ಟಿದರು. ಮುರಳಿ ವಿಜಯ್ ತನ್ನ 75ನೆ ಇನಿಂಗ್ಸ್‌ನಲ್ಲಿ 3000 ರನ್ ಪೂರೈಸಿದರು. ಭಾರತೀಯರ ಪೈಕಿ ವೀರೇಂದ್ರ ಸೆಹ್ವಾಗ್ ಅತ್ಯಂತ ವೇಗವಾಗಿ(55 ಇನಿಂಗ್ಸ್) ಮೂರು ಸಾವಿರ ರನ್ ಪೂರೈಸಿದ್ದರು.

2002: ಭಾರತ 2002ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ನ ವಿರುದ್ಧ 3ನೆ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿತ್ತು. ದ್ರಾವಿಡ್ ಹಾಗೂ ತೆಂಡುಲ್ಕರ್ ಹೆಡ್ಡಿಂಗ್ಲೆಯಲ್ಲಿ 3ನೆ ವಿಕೆಟ್‌ಗೆ 150 ರನ್ ಸೇರಿಸಿದ್ದರು.

2007: ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಮೂರನೆ ಹಾಗೂ ನಾಲ್ಕನೆ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 2007ರಲ್ಲಿ ಕೊನೆಯ ಬಾರಿ ಶತಕ ಬಾರಿಸಿದ್ದರು. 2007ರಲ್ಲಿ ಢಾಕಾದಲ್ಲಿ ಬಾಂಗ್ಲಾದೇಶದ ವಿರುದ್ಧ ತೆಂಡುಲ್ಕರ್ ಹಾಗೂ ದ್ರಾವಿಡ್ ಈ ಸಾಧನೆ ಮಾಡಿದ್ದರು.

06: ಈವರೆಗೆ ಭಾರತದ ಆರು ಕ್ರಿಕೆಟಿಗರು ತಮ್ಮ 50ನೆ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. 50ನೆ ಪಂದ್ಯದಲ್ಲಿ ಶತಕ ಬಾರಿಸಿರುವ ಕೊಹ್ಲಿ ಅವರು ಸುನೀಲ್ ಗವಾಸ್ಕರ್, ವಿವಿಎಸ್ ಲಕ್ಷ್ಮಣ್, ಗುಂಡಪ್ಪ ವಿಶ್ವನಾಥ್, ಪಾಲಿ ಉಮ್ರಿಗರ್ ಹಾಗೂ ಕಪಿಲ್‌ದೇವ್ ಸಾಲಿಗೆ ಸೇರ್ಪಡೆಯಾದರು.

 07: ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಏಳು ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳಿದ್ದಾರೆ. ಭಾರತ ವಿರುದ್ಧ ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿ ತಂಡವೊಂದು 6ಕ್ಕಿಂತ ಹೆಚ್ಚು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕಿಳಿಸಿದೆ.

 19: ವಿರಾಟ್ ಕೊಹ್ಲಿ ನಾಯಕತ್ವದ ಸತತ 19ನೆ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಲಾಗಿದೆ. ವಿಶಾಖಪಟ್ಟಣದಲ್ಲಿ ಭಾರತ ಎರಡು ಬದಲಾವಣೆ ಮಾಡಿತ್ತು. ಜಯಂತ್ ಯಾದವ್ ಅವರು ಅಮಿತ್ ಮಿಶ್ರಾ ಬದಲಿಗೆ ಹಾಗೂ ಕೆಎಲ್ ರಾಹುಲ್ ಅವರು ಗೌತಮ್ ಗಂಭೀರ್ ಬದಲಿಗೆ ಆಡುವ ಬಳಗ ಸೇರಿದ್ದಾರೆ.

 08: ಭಾರತದ 8 ಕ್ರಿಕೆಟಿಗರು ಒಂದೇ ಮೈದಾನದಲ್ಲಿ ಎರಡು ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದಾರೆ. ತಿಂಗಳ ಹಿಂದೆ ನ್ಯೂಝಿಲೆಂಡ್ ವಿರುದ್ಧ ವಿಶಾಖಪಟ್ಟಣದಲ್ಲಿ ಏಕದಿನ ಪಂದ್ಯಕ್ಕೆ ಕಾಲಿಟ್ಟಿದ್ದ ಜಯಂತ್ ಯಾದವ್ ಅದೇ ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X