ವೇಣೂರು: ಕಾಂಗ್ರೆಸ್ ಕಾರ್ಯಕರ್ತರಿಂದ ಸಪ್ತಾಹ ಮೆರವಣಿಗೆಗೆ ಅಡ್ಡಿ
ಸಪ್ತಾಹ ಕಾರ್ಯಕ್ರಮಕ್ಕೆ ಶಾಸಕರ ಕಡೆಗಣನೆ ಹಿನ್ನೆಲೆ

ಕಾರ್ಕಳ, ನ.17: ವೇಣೂರಿನಲ್ಲಿ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸದೆ ಅಪಮಾನ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಹಕಾರಿ ಸಪ್ತಾಹದ ಮೆರವಣಿಗೆ ತಡೆದು ರಸ್ತೆ ತಡೆ ನಡೆಸಿದರು.
ಸಹಕಾರಿ ಸಪ್ತಾಹ ಕಾರ್ಯಕ್ರಮದ ಆಮಂತ್ರಣದಲ್ಲಿ ಈ ಬಾರಿ ಶಾಸಕರ ಹೆಸರೇ ಇರಲಿಲ್ಲ. ಉದ್ದೇಶ ಪೂರ್ವಕವಾಗಿಯೇ ಹಿರಿಯ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಕಾರ್ಯಕರ್ತರು ಆರೊಪಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶೇಖರ ಕುಕ್ಕೇಡಿ ಹಾಗೂ ಧರಣೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನಾಕಾರರನ್ನು ವೇಣೂರು ಪೋಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಪಗರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಭಿನಂದನ್ ಹರೀಶ್, ಮೋಹನ್ ಗೌಡ ಕಲ್ಮಂಜ, ಕುಕ್ಕೇಡಿ ಗ್ರಾಪಂ ಅಧ್ಯಕ್ಷೆ ತೇಜಾಕ್ಷಿ, ಅಜಯ್ ಬೆಳ್ತಂಗಡಿ, ದಿನೇಶ್ ಬೆಳಾಲು,ವೇಣೂರು ಮತ್ತಿತರರು ಇದ್ದರು.
Next Story





