1,000 ರೂ.ನೋಟು ಮರು ಬಿಡುಗಡೆಯಿಲ್ಲ: ಜೇಟ್ಲಿ

ಹೊಸದಿಲ್ಲಿ,ನ.17: ನಿಷೇಧಿತ ನೋಟುಗಳ ವಿನಿಮಯವನ್ನು ಈಗಿನ 4,500 ರೂ.ಗಳಿಂದ 2,000 ರೂ.ಗಳಿಗೆ ತಗ್ಗಿಸಿರುವ ಸರಕಾರದ ನಿರ್ಧಾರವು ಹಣದ ದುರುಪಯೋಗವನ್ನು ತಡೆಯಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದಿಲ್ಲಿ ಹೇಳಿದರು. ಸದ್ಯೋಭವಿಷ್ಯದಲ್ಲಿ 1000 ರೂ.ನೋಟನ್ನು ಮತ್ತೆ ಬಿಡುಗಡೆ ಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಸದ್ಯಕ್ಕಂತೂ ಸಾವಿರ ರೂ.ನೋಟನ್ನು ಪುನರ್ ಬಿಡುಗಡೆಗೊಳಿಸುವ ಯೋಜನೆಯನ್ನು ಸರಕಾರವು ಹೊಂದಿಲ್ಲ ಎಂದರು.
ದೇಶಾದ್ಯಂತ ಹರಡಿಕೊಂಡಿರುವ ಎಟಿಎಂಗಳ ಪೈಕಿ 22,500 ಎಟಿಎಂಗಳ ಮಾರ್ಪಾಡು ಪ್ರಕ್ರಿಯೆ ಇಂದು ನಡೆಯುತ್ತಿದೆ ಎಂದು ಅವರು ತಿಳಿಸಿದರು.
Next Story





