ವಿಧಾನ ಸಭೆಗಳಿಗೂ ಚುನಾವಣೆ ನಡೆಸಲು ಮೋದಿ ಸಿದ್ಧತೆ: ಜನಾರ್ದನ ಪೂಜಾರಿ
ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಲೋಕ ಸಭೆ

ಮಂಗಳೂರು, ನ.15; ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಲೋಕ ಸಭೆ ಹಾಗೂ ಎಲ್ಲಾ ವಿಧಾನ ಸಭೆಗಳಿಗೂ ಚುನಾವಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ. ದೇಶದಲ್ಲಿ 1000 ಮತ್ತು 500 ರೂಗಳ ನೋಟನ್ನು ಸರಕಾರ ಅಮಾನ್ಯಗೊಳಿಸುವ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಲು ಕೇಂದ್ರ ಸರಕಾರ ಸೋತಿದೆ. ದೇಶದಲ್ಲಿ ಮುಂದಿನ ಹಂತದಲ್ಲಿ ಆದಾಯ ತೆರಿಗೆಯನ್ನು ರದ್ದು ಮಾಡಲು ನರೇಂದ್ರ ಮೋದಿ ಕ್ರಮ ಕೈಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ. ನೋಟಿನ ಅಮಾನ್ಯದಿಂದ ಉಂಟಾಗಿರುವ ಸಮಸ್ಯೆಯಿಂದ ಜನಸಾಮಾನ್ಯರು ಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಸಂಸತ್‌ನಲ್ಲಿ ವಿವಿಧ ಪಕ್ಷಗಳ ಹಿರಿಯ ನಾಯಕರ ಹೇಳಿಕೆಗಳನ್ನು ಕೇಳಲು ಪ್ರಧಾನಿಗೆ ವ್ಯವದಾನವಿಲ್ಲದಂತಾಗಿದೆ. ಜನ ಸಾಮಾನ್ಯರು ಮದುವೆ, ಮಕ್ಕಳ ಶಿಕ್ಷಣಕ್ಕಾಗಿ ಕೂಡಿಟ್ಟ ಹಣವನ್ನು ವಿನಿಯೋಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನಾರ್ದನ ಪೂಜಾರಿ ಟೀಕಿಸಿದರು.
ರೆಡ್ಡಿ ಮಗಳ ಮದುವೆ ಹಣದ ವ್ಯಯ;ಹಾಜರಾದ ರಾಜಕೀಯ ಮುಖಂಡರಿಗೆ ಟೀಕೆ: ಜನಾರ್ದನ ರೆಡ್ಡಿ ಮಗಳ ಮದುವೆಗೆ ಬಳಸಲಾದ ಹಣದ ಬಗ್ಗೆ ಯಾರೂ ಮಾತನಾಡುವುದಿಲ್ಲ.ಆ ಮದುವೆಗೆ ಹೋಗಿ ಬಂದಿದ್ದಾರೆ.ಅದ್ದೂರಿ ಮದುವೆಗೆ ಅವಕಾಶ ಇಲ್ಲದಿದ್ದರೂ ಅಂತಹ ಮದುವೆ ನಡೆಸಿರುವ ಬಗ್ಗೆ ಚಕಾರವೆತ್ತದೆ ಆ ಮದುವೆಗೆ ಹೋಗಿ ಭಾಗವಹಿಸಿರುವ ರಾಜಕೀಯ ಮುಖಂಡರನ್ನು ಜನಾರ್ದನ ಪೂಜಾರಿ ಟೀಕಿಸಿದರು.ಬರಗಾಲ ಇರುವಾಗ ಇಂದಿರಾ ಗಾಂಯ ಜಯಂತಿಯ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ನನ್ನ ವಿರೊಧವಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.ಸುದ್ದಿಗೊಷ್ಠಿಯಲ್ಲಿ ಕಳ್ಳಿಗೆ ತಾರಾನಾಥ ಶೆಟ್ಟಿ,ಅರುಣ್ ಕುವೆಲ್ಲೋ ,ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .







